ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ಸಿಖ್ ಗುರು ಸೆರೆ- ಸರ್ಕಾರ ಪರಿಶೀಲನೆ
webdunia
ಸಿಖ್ ಸಮುದಾಯ ಘರ್ಷಣೆಗೆ ಕಾರಣವಾದ ದೇರಾ ಸಚ್ಚಾ ಸೌಧ ಮುಖ್ಯಸ್ಥ ಗುರ್ಮೀತ್ ರಾಂ ರಹೀಂ ಸಿಂಗ್ ಅವರನ್ನು ನ್ಯಾಯಾಲಯ ಆದೇಶದನ್ವಯ ಬಂಧಿಸಲು ಇದೀಗ ಪೊಲೀಸರು ಪಂಜಾಬ್ ರಾಜ್ಯ ಸರ್ಕಾರದ ಅನುಮತಿಗಾಗಿ ಮನವಿ ಸಲ್ಲಿಸಿದ್ದಾರೆ.

ಪ್ರಸ್ತತ ಸಿಖ್ ಸಮುದಾಯ ವಿಭಾಗದ ಮುಖ್ಯಸ್ಥನಿಂದ ಸ್ಥಳೀಯ ಸಿಖ್ ಸಮುದಾಯದವರ ಧಾರ್ಮಿಕ ಭಾವನೆಗೆ ಘಾಸಿಯಾಗಿದೆ ಎಂಬ ಅರ್ಜಿಯ ಮೇಲೆ ನ್ಯಾಯಾಲಯವು ಗುರ್ಮೀತ್ ಅವರ ವಿರುದ್ಧ ನ ಬಂಧನ ಮತ್ತಿತರ ಕಾನೂನು ಕ್ರಮಕ್ಕೆ ಆದೇಶಿಸಿತ್ತು.

ಸರ್ಕಾರ ಇದೀಗ ನಿರ್ಧಾರ ಸ್ವೀಕರಿಸಬೇಕಾಗಿದೆ. ಪೊಲೀಸ್ ಇಲಾಖೆಯ ಅರ್ಜಿ ಇದೀಗ ಪರಿಶೀಲನೆಯಲ್ಲಿದೆ ಎಂಬುದಾಗಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಆರ್ ಐ ಸಿಂಗ್ ತಿಳಿಸಿದ್ದಾರೆ.

ಪ್ರಸ್ತುತ ಧಾರ್ಮಿಕ ಗುರುವಿನ ಬಂಧನಕ್ಕಾಗಿ ಮೇ 20ರಂದು ಬಟಿಂಡಾ ನ್ಯಾಯಾಲಯವು ಷರ್ತ ಬದ್ಧ ಜಾಮೀನು ರಹಿತ ಬಂಧನ ವಾರಂಟ್ ಹೊರಡಿತ್ತು. ಬಂಧನಕ್ಕಾಗಿ ರಾಜ್ಯ ಸರ್ಕಾರದ ಅನುಮೋದನೆ ಕೋರಲು ಕೂಡ ನ್ಯಾಯಾಲಯ ಸೂಚಿಸಿತ್ತು.ಪ್ರಸ್ತುತ ಬಂಧನ ಆದೇಶ ಜುಲೈ 1ರ ವರೆಗೆ ಜಾರಿಯಲ್ಲಿರುತ್ತಿದೆ.
ಮತ್ತಷ್ಟು
ಮಳೆಗೆ 55 ಬಲಿ-ಆಂಧ್ರದಲ್ಲಿ ಸೇನೆ
ರಾಷ್ಟ್ರಪಿತನಿಗೆ ವಂದಿಸಿ ನಾಪತ್ರಸಲ್ಲಿಸಿದ ಪ್ರತಿಭಾ
ಮುಂಗಾರು ಪ್ರಬಲ-ಕಳೆದ ವರ್ಷಕ್ಕಿಂತ ದುರ್ಬಲ
ಏಷ್ಯಾಕ್ರೀಡೆ ಪ್ರದೇಶದಲ್ಲಿ ಸ್ಫೋಟ,4 ಸಾವು
ಕಲಾಂ ಸ್ಪರ್ಧೆಯಲ್ಲಿಲ್ಲ- ಪ್ರತಿಭಾ ಇಂದು ನಾಮಪತ್ರ
ಪ್ರತಿಭಾ ಪಾಟೀಲ್ ವಿರುದ್ಧ ಕ್ರಿಮಿನಲ್ ಆರೋಪ!