ರಾಷ್ಟ್ರಪತಿ ಭವನವನ್ನು ಪ್ರಜಾಭವನವಾಗಿ ಪರಿವರ್ತಿಸಿದೆ, ಅದನ್ನೀಗ ರಾಜಕೀಯ ಭವನವಾಗಿ ಮಲಿನಗೊಳಿಸಲು ಬಯಸದೆ ವಿರಮಿಸುತ್ತಿದ್ದೇನೆ- ಜುಲೈ 24ರಂದು ಅಧಿಕಾರಾವಧಿ ಮುಕ್ತಾಯಗೊಳಿಸುತ್ತಿರುವ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಪ್ರತಿಕ್ರಿಯೆ ಇದು.
ಕಳೆದ ಐದು ವರ್ಷಗಳವಧಿಯಲ್ಲಿ ರಾಷ್ಟ್ರಪತಿ ಭವನವನ್ನು ಪ್ರಜಾಭವನವಾಗಿ ಮಾಡ ಉದಾರತೆ ಪ್ರದರ್ಶಿಸಿದ್ದೇನೆ. ಇದು ದೇಶಕ್ಕೊಂದು ಮಾದರಿಯಾಗಬಹುದು. ಇದನ್ನು ಹಾನಿಗೊಳಿಸಲು ಇಚ್ಛಿಸುತ್ತಿಲ್ಲ. ಆ ಕಾರಣಕ್ಕಾಗಿ ಸಾಕು ಅಂದಾಗ ಸಾಕು ಮಾಡಲು ನಿರ್ಧರಿಸಿದೆ ಎಂದಿದ್ದಾರೆ.
ಎರಡನೇ ಅವಧಿಗಾಗಿ ಸ್ಪರ್ಧಿಸಿಲ್ಲವೇಕೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಲಾಂ, ಒಮ್ಮೆ ನೀವೆಲ್ಲಾ ಬಯಸಿ ಒಮ್ಮತದಿಂದ ರಾಷ್ಟ್ರಪತಿಯಾಗಿಸಿದಿರಿ, ಈಗ ದ್ವಿತೀಯ ಅವಧಿಗೆ ಸ್ಪರ್ಧಾ ಕಣಕ್ಕಿಳಿದು ಅಭ್ಯರ್ಥಿಯಾಗಬೇಕಿದೆ ಇದು ನನಗಿಷ್ಟವಿಲ್ಲ. ಪಕ್ಷದ ಅಭ್ಯರ್ಥಿಯಾಗಿ, ಚುನಾವಣಾ ಕಣಕ್ಕಿಳಿದು, ರಾಷ್ಟ್ರಪತಿ ಭವನವನ್ನು ರಾಜಕೀಯಗೊಳಿಸುವ ಆಸಕ್ತಿ ಇಲ್ಲ. ಇದು ಎಂದೆಂದಿಗೂ ಪ್ರಜಾಭವನವಾಗಿಯೇ ಇರಬೇಕು ಎಂದರು.
|