ಉತ್ತರ ಪ್ರದೇಶದ ಕೌಶಾಂಬಿ ಜಲ್ಲೆಯಲ್ಲಿ ವಿವಾಹ ದಿಬ್ಬಣ ಹೇರಿ ಸಾಗುತ್ತಿದ್ದ 2 ದೋಣಿಗಳು ಲಕ್ನೋ ಬಳಿ ನದಿಯಲ್ಲಿ ಮುಳುಗಿದ ಪರಿಣಾಮ 31 ಮಂದಿ ಜಲ ಸಮಾಧಿಯಾಗಿದ್ದಾರೆ. ಈ ವರೆಗೆ 5 ಶವಗಳನ್ನು ಈ ವರೆಗೆ ಹೊರತೆಗೆಯಲಾಗಿದೆ.
ಲಕ್ನೊದಿಂದ 240 ಕಿಮೀ ದೂರದಲ್ಲಿ ಈ ದುರಂತ ಸಂಭವಿಸಿದೆ. ಮೊದಲ ದೋಣಿಯಲ್ಲಿ 25 ಮಂದ ಪರಯಾಣಿಸುತ್ತಿದ್ದು, ಅಧಿಕ ಭಾರದಿಂದಾಗಿ ಅದು ನದಿ ಮಧ್ಯೆ ಮುಳುಗಿದಾಗ 19 ಮಂದಿ ಕಾಣೆಯಾಗಿದ್ದಾರೆ.6 ಮಂದ ಈಜಿ ದಡಸೇರಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ 17 ಮಂದಿಯನ್ನು ಹೇರಿ ಸಾಗುತ್ತಿದ್ದ ಪ್ರಯಾಣಿಕ ದೋಣಿ ಗಂಗಾನದಿಯಲ್ಲಿ ಮುಳುಗಿದೆ.ಲಕ್ನೊದಿಂದ 320 ಕಿಮೀ ದೂರದ ಮಿರ್ಝಾಪುರದಿ ಬಳಿ ಈ ದುರಂತ ಸಂಭವಿಸಿದೆ. ಇದರಲ್ಲಿ 12 ಮಂದಿ ಸಾವಿಗೀಡಾಗಿರುವರೆಂದು ಶಂಕಿಸಲಾಗಿದೆ.
ವಿವಾಹ ಸರಕುಗಳು, ಉಡುಗೊರೆಗಳು, ಬೈಕ್ ನಂತಹ ವಾಹನಗಳು, ಮಂಚಗಳು ಇತ್ಯಾದಿಗಳಿಂದ ದೋಣಿ ಕಿಕ್ಕಿರಿದು, ಅಧಿಕ ಭಾರದಿಂದ ಅನಾಹುತ ಸಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
|