ದೇಶದ ವಾಣಿಜ್ಯಿಕ ರಾಜಧಾನಿ ಮುಂಬೈಯಲ್ಲಿ ಮುಂಗಾರು ಮಳೆಯ ಪ್ರಕೋಪಕ್ಕೆ ಸಾವುನೋವು ಆಸ್ತಿಪಾಸ್ತಿ ಹಾನಿಯ ವರದಿಗಳು ದಾಖಲಾಗತೋಡಗಿವೆ.
ಚೆಂಬೂರಿನಲ್ಲಿ ಭಾರಿ ಮಳೆಯಿಂದಾಗಿ ಸಂಭವಿಸಿದ ಭೂಕುಸಿತದಲ್ಲಿ 12 ಮಂದಿ ಮಣ್ಣಿನಡಿ ಸಮಾಧಿಯಾಗಿದ್ದಾರೆ. ಇವರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಅವರನ್ನು ರಕ್ಷಿಸಲು ಕಾರ್ಯಾಚರಣೆ ನಡೆಯುತ್ತಿದೆ.
ಮುಂಬೈಯಲ್ಲಿ ಈ ಬಾರಿಯ ಮುಂಗಾರಿನ ಆರಂಭಿಕ ಮಳೆ ಗಂಭೀರ ಸ್ವರೂಪ ಪಡೆದಿದೆ. ಕಳೆದ 24 ತಾಸುಗಳವಧಿಯಲ್ಲಿ ಕೊಲಾಬಾದಲ್ಲಿ 279 ಮಿಮೀ ಮಳೆಯಾಗಿದ್ದರೆ, ಸಾಂತಾಕ್ರೂಜ್‌ನಲ್ಲಿ 209 ಮಿಮೀ ಮಳೆಯಾಗಿದೆ.
ಗ್ರಾಂಟ್ ರೋಡ್‌ನಲ್ಲಿ ಕಟ್ಟಡವೊಂದು ಕುಸಿದು 1 ಸಾವು ಸಂಭವಿಸಿ ಹಲವರು ಗಾಯಗೊಂಡಿದ್ದಾರೆ. ಮಳೆಯ ಆಘಾತದಿಂದಾಗಿ ಮುಂಬೈ ತತ್ತರಿಸಿದೆ.
|