ದೇಶದ ದಕ್ಷಿಣಾತ್ಯ ರಾಜ್ಯಗಳಲ್ಲಿ ಸಂಭವಿಸಿದ ಮಂಗಾರು ಮಳೆ, ಪ್ರಕೃತಿ ವಿಕೋಪಕ್ಕೆ ಬಲಿಯಾದವರ ಸಂಖ್ಯೆ ಇದೀಗ 100ಕ್ಕೇರುತ್ತಿದೆ.
ಮಹಾರಾಷ್ಟ್ರ,ಆಂಧ್ರಪ್ರದೇಶ, ಕೇರಳ,ಗೋವಾ, ಕರ್ನಾಟಕಗಳಲ್ಲಿ ಮುಂಗಾರು ತನ್ನ ರುದ್ರನರ್ತನ ಆರಂಭಿಸಿದೆ. ಆಂಧ್ರ ಹಾಗೂ ಕೇರಳದಲ್ಲಿ ಸಾವಿನ ಸಂಖ್ಯೆ 70 ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಕರ್ನಾಟಕದಲ್ಲಿ 35 ಮಂದಿ ಬಲಿಯಾಗಿದ್ದರೆ, ಗೋವದಲ್ಲಿ ಅದೃಷ್ಟವಶಾತ್ ಯಾವುದೇ ಸಾವುನೋವು ವರದಿಯಾಗಿಲ್ಲ ಆದರೆ ಆಸ್ತಿಪಾಸ್ತಿ ಹಾನಿ ಮುಂದುವರಿದಿದೆ.
ಮಹಾರಾಷ್ಟ್ರದಲ್ಲಿ ಮಳೆಯಿಂದಾದ ಹಾನಿಗೆ ಈ ವರೆಗೆ ಕೆಲವು ಸಾವು, ಗಾಯಗಳ ಸಂಖ್ಯೆ ವರದಿಯಾಗಿದೆ. ಮಹಾರಾಷ್ಟ್ರದ ಕೃಷ್ಣಾ ಹಾಗೂ ಗೋದಾವರಿ ನದಿಗಳು ದಡಮೀರಿ ಹರಿಯುತ್ತಿವೆ.
ಆಂಧ್ರಪ್ರದೇಶದಲ್ಲಿ 49 ಶೇಕಡ ಹೆಚ್ಚು ಮಳೆಯಾಗಿದೆ. ಈ ವರೆಗೆ 32 ಮಂದಿ ಸಾವನ್ನಪ್ಪಿದ್ದು,20ಕ್ಕೂ ಅಧಿಕ ಮಂದಿಗಾಯಗೊಂಡಿದ್ದಾರೆ.
|