ರಾಷ್ಟ್ರಪತಿ ಆಯ್ಕೆಗಾಗಿ ಚುನಾವಣಾ ಕಣ ರಂಗೇರುತ್ತಿದ್ದು, ಎನ್‌ಡಿಎ ಬೆಂಬಲಿತ ಅಭ್ಯರ್ಥಿ ಉಪರಾಷ್ಟ್ರಪತಿ ಭೈರೋನ್ ಸಿಂಗ್ ಶೆಖಾವತ್ ಸೋಮವಾರ ನಾಮಪತ್ರ ಸಲ್ಲಿಸುವರೆಂದು ನಿರೀಕ್ಷೆ ಇದೆ.
ಕಾಂಗ್ರೆಸ್ ಎಡರಂಗ ಒಕ್ಕೂಟ ಯುಪಿಎ ಅಭ್ಯರ್ಥಿಯಾಗಿ ಪ್ರತಿಭಾ ಪಾಟೀಲ್ ನಾಮಪತ್ರ ಸಲ್ಲಿಸಿರುವಂತೆಯೇ, ಭಾರೀ ನಿರಕ್ಷೆಯಲ್ಲಿದ್ದ ಡಾ. ಅಬ್ದುಲ್ ಕಲಾಂ ಅವರ ಎರಡನ್ ಅವಧಿ ಅಧಿಕಾರ ನಿರಾಕರಣೆಯಿಂದ ಸ್ಪರ್ಧಾ ಕಣ ನಿಚ್ಛಳವಾಗಿದೆ.
ತೃತೀಯ ರಂಗ ರಾಷ್ಟ್ರೀಯ ಪ್ರಗತಿಪರ ಐಕ್ಯರಂಗ (ಯುಎನ್‌ಪಿಎ) ಹೊಸ ಅಭ್ಯರ್ಥಿ ಆಯ್ಕೆ ನಡೆಸುತ್ತಿದೆ ಎನ್ನಲಾಗುತ್ತಿದೆಯಾದರೂ ಶೆಕಾವತ್ ಅವರನ್ನೇ ಬೆಂಬಲಿಸುವರೋ ಕಾದು ನೋಡಬೇಕಿದೆ.
|