ಕರ್ನಾಟಕ, ಮಹಾರಾಷ್ಟ್ರ ಮುಂತಾದ ರಾಜ್ಯಗಳಲ್ಲಿ ಮಳೆಯ ಪ್ರಕೋಪ ಏರುತ್ತಿದ್ದು ಸಾವನ ಸಂಖ್ಯೆ ಒಟ್ಟು 126ಕ್ಕೇರಿದೆ. ಸಾವಿರಾರು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.
ಕಳೆದ ದಿನಗಳಲ್ಲಿ ದುಃಸ್ಥಿತಿಯಲ್ಲಿದ್ದ ಕೇರಳ ಹಾಗೂ ಆಂಧ್ರಪ್ರದೇಶಗಳಲ್ಲೀಗ ಸ್ಥಿತಿ ಸುಧಾರಿಸುತ್ತಿದ್ದು, ಪ್ರವಾಹ ಇಳಿಮುಖವಾಗುತ್ತಿದೆ. ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ.ಆದರೂ ಸಾವಿನ ಸಂಖ್ಯೆ 80 ದಾಖಲಿಸಿದೆ.
ಕಳೆದ 24 ತಾಸುಗಳಲ್ಲಿ ಮುಂಬೈ ಹಾಗೂ ನಿಕಟವರ್ತಿ ಪ್ರದೇಶಗಳಲ್ಲಿ ಸಾವಿನ ಸಂಖ್ಯೆ5ರಷ್ಟಾಗಿದೆ. ಹವಾಮಾನ ಅಧಿಕಾರಿಗಳ ಪ್ರಕಾರ ಮಳೆ ಮತ್ತಷ್ಟು ಪ್ರಬಲವಾಗುತ್ತಿದೆ. ಬಿರುಗಾಳಿಯ ವೇಗ ಮತ್ತಷ್ಟು ಹೆಚ್ಚುತ್ತಿದೆ.
ಬೃಹನ್ಮುಂಬೈಯನ್ನು ಸಂಪರ್ಕಿಸುವ ವಿಮಾನ ಹಾಗೂ ರೈಲುಗಾಡಿಗಳನ್ನು ಮಳೆ -ಗಾಳಿಯ ಕಾರಣದಿಂದ ವಿಳಂಬ ಮಾಡಲಾಗಿದೆ ಅಥವಾ ತಡೆಹಿಡಿಯಲಾಗಿದೆ. ಗ್ರೇಂಟ್ ರೋಡ್ ಪ್ರದೇಶದಲ್ಲಿ ಕಟ್ಟಡ ಕುಸಿದು 2 ಮಂದಿ ಹಾಗೂ ಗೋಡೆ ಕುಸಿದು3 ಮಂದಿ ಸಾವನ್ನಪ್ಪಿದ್ದಾರೆ.
ಕರ್ನಾಟಕದಲ್ಲೂ ಪರಿಸ್ಥಿತಿ ಬಿಗಡಾಯಿಸಿದೆ , ಸಾವಿನ ಸಂಖ್ಯೆ 40ಕ್ಕೇರಿದೆ. ಮಲೆನಾಡು, ಕರಾವಳಿ ಬಯಲು ಸೀಮೆಗಳಲ್ಲಿ ಮಳೆ ಗಾಳಿ ತೀವ್ರವಾಗಿ ಆಸ್ತಿಪಾಸ್ತಿ ಹಾನಿಯಾಗಿದೆ. ಸಮುದ್ರದಲ್ಲಿ ಕಡಲ್ಕೊರೆತ ಹೆಚ್ಚಿದ್ದರೆ, ನದಿಗಳು ಮೇರೆ ಮೀರಿ ಹರಿಯುತ್ತಿವೆ.
|