ಬಿಜೆಪಿನೇತೃತ್ವದ ಎನ್‌ಡಿಎ ಕೂಟದ ಅಂಗಪಕ್ಷವಾದ ಶಿವಸೇನೆ ಇದೀಗ ಮರಾಠಿಗರಾದ ಯುಪಿಎ ಅಭ್ಯರ್ಥಿ ಪ್ರತಿಭಾ ಪಾಟೀಲ್ ಅವರತ್ತ ಒಲವುಗಳಿಸಿರುವುದರಿಂದ ಎನ್‌ಡಿಎ ಸಂಕಷ್ಟಕ್ಕೀಡಾಗಿದೆ.
ಶಿವಸೇನೆಯ ನಿಲುವು ನಿರ್ಣಾಯಕವಾಗಿದ್ದು, ಇಂದು ತನ್ನ ನಿಲುವನ್ನು ಪ್ರಕಟಿಸುವುದಾಗಿ ಮುಖ್ಯಸ್ಥ ಬಾಳಾಸಾಹೇಬೇ ಠಾಕ್ರೆ ಪ್ರಕಟಿಸಿದ್ದಾರೆ.
ಮಹಾರಾಷ್ಟ್ರೀಯರು ನಾಡು-ನುಡಿಯ ಕುರಿತು ವಿಶೇಷ ಒಲವು ಹೊಂದಿರುವ ಶಿವಸೇನೆಗೆ ಪ್ರಸ್ತುತ ರಾಷ್ಟ್ರಪತಿ ಆಯ್ಕೆ ಚುನಾವಣೆಗೆ ಕಾಂಗ್ರೆಸ್ ಮರಾಠಿಗರಾದ ಪ್ರತಿಭಾ ಪಾಟೀಲರನ್ನು ಅಭ್ಯರ್ಥಿಯನ್ನಾಗಿಸಿರುವುದು ಇಬ್ಬಂದಿಗೆ ಕಾರಣವಾಗಿದೆ.
ಒಂದೆಡೆ ಸಮಾನ ಮನಸ್ಕ ಸಂಘಟನೆಗಳಿರುವ ಎನ್‌ಡಿಎ ಅಭ್ಯರ್ಥಿಯನ್ನು ಬೆಂಬಲಿಸಬೇಕಾದ ಅಗತ್ಯ , ಇನ್ನೊಂದೆಡೆ ಮರಾಠಿಗರ ಹಿತರಕ್ಷಣೆ ಎನ್ನುವ ಮೂಲಮಂತ್ರದ ನಿಲುವು ಇತ್ಯಾದಿಗಳಿಂದ ಶಿವಸೇನೆ ತನ್ನ ನಿಲುವು ಪ್ರಕಟಿಸಲು ಹಿಂದೇಟು ಹಾಕಿತ್ತು.
ಈ ವಾರ ಚುನಾವಣೆಗೆ ನಿರ್ಣಾಯಕವಾಗಿದ್ದು,(ಜೂನ್30ಕ್ಕ) ನಾಮಪತ್ರ ಪ್ರಕ್ರಿಯೆ ಅಂತ್ಯಗೊಳ್ಳಲಿದೆ. ಇದರಿಂದಾಗಿ ಇಂದು ಅಥವಾ ನಾಳೆ ಶಿವಸೇನೆಯ ನಿರ್ಣಯ ಬಹಿರಂಗ ಗೊಳ್ಳಲಿದೆ.
|