ಪಶ್ಚಿಮ ಬಂಗಾಳದ ಅಪರಾಧ ತನಿಖಾ ದಳ ಭಾನುವಾರ ಸಂಜೆ ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ನಿಷೇಧಿತ ಹರ್ಕತ್ ಉಲ್ ಜೆಹಾದ್ ಅಲ್ ಇಸ್ಲಾಂ (ಹುಜಿ) ಸಂಘಟನೆಯ ಮೂರು ಮಂದಿಯನ್ನು ಬಂಧಿಸಿದ್ದಾರೆ.
ಆರೋಪಿಗಳನ್ನು ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುತ್ತಿದೆ. ಇವರಿಂದ ಇನ್ನಷ್ಟು ಮಾಹಿತಿಗಾಗಿ ಮತ್ತೆ ತನಿಖಾ ತಂಡದ ವಿಚಾರಣೆಗೆ ವಶಕ್ಕೆ ಪಡೆಯುವ ನಿರೀಕ್ಷೆ ಇದೆ.
ಲಕ್ನೊದಲ್ಲಿ ಬಂಧಿತರನ್ನು ಉಗ್ರಗಾಮಿ ಸಂಘಟನೆ ಹುಜಿಯ ಭಾರತ ವಿಭಾಗ ಮುಖ್ಯಸ್ಥ ಜಲಾಲುದ್ದೀನ್ ನ ತೀರಾ ನಿಕಟವರ್ತಿಗಳೆಂದು ಗುರುತಿಸಲಾಗಿದೆ.ಜಲಾಲುದ್ದೀನ್‌ನಲ್ಲಿ ಶನಿವಾರ ಬಂಧಿಸಲಾಗಿತ್ತು.ಇಂದರೊಂದಿಗೆ ಬಂಧಿತ ಸಂಖ್ಯೆ 4ಕ್ಕೇರಿದೆ.
ಕುಖ್ಯಾತರನ್ನು ಅಕ್ಬರ್ , ಅಝಿಜುಲ್ ರೆಹ್ಮಾನ್,ಮೊಕ್ತಾರ್ ಎಂದು ಗುರುತಿಸಲಾಗಿದೆ. ಆರೋಪಿ ಜಲಾಲುದ್ದೀನ್ ವಿಚಾರಣೆಯಿಂದ ಬಹಿರಂಗ ಗೊಂಡ ಮಾಹಿತಿಯನ್ನಾಧರಿಸಿ ಬಂಧನ ಕಾರ್ಯಾಚರಣೆ ನಡೆಸಲಾಗತ್ತು.
ಆರೋಪಿಗಳಿಗೆ ಪಾಕ್‌ಗೂಡಚರ ಸಂಸ್ಥೆ ಐಎಸ್‌ಐ ಯೊಂದಿಗಿನ ಸಂಪರ್ಕ ಇನ್ನಷ್ಟೇ ಬಹಿರಂಗ ಗೊಳ್ಳಬೇಕಿದೆ. ಆದರೆ ಕದೀಂ ಶೂಸ್ ಮುಖ್ಯಸ್ಥ ಪಾರ್ಥೋ ರಾಯ್ ಬರ್ಮನ್ ಅಪಹರಣದಲ್ಲಿ ಪ್ರಮುಖ ಪಾತ್ರ ವಹಿಸಿದವರಾಗಿದ್ದಾರೆ.
|