ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
'ರಾಷ್ಟ್ರಪತಿ ಘನತೆ'ಕಾಪಾಡಿ-ದೇವೇಗೌಡ
webdunia
ರಾಜಕೀಯ ಪಕ್ಷಗಳ ರಾಜಕೀಯ ಚದುರಂಗದಾಟದ ಕಣವಾಗಿರುವ ರಾಷ್ಟ್ರಪತಿ ಚುನಾವಣೆ ಪ್ರಕ್ರಿಯೆ ದುರದೃಷ್ಟಕರ, ರಾಷ್ಟ್ರಪತಿ ಪದವಿ ರಾಜಕೀಯಗೊಳಿಸುವುದು ಪ್ರಜಾಸತ್ತೆಗೆ ಹಿತಕರವಲ್ಲ ಎಂದು ಜೆಡಿಎಸ್ ಅಧ್ಯಕ್ಷ ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡ ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್ ಎಡರಂಗಗಳಿರುವ ಯುಪಿಎ,ಬಿಜೆಪಿ ಸಹಪಕ್ಷಗಳ ಎನ್‌ಡಿಎ,ಇತರೆಲ್ಲ ಪಕ್ಷಗಳು ಸೇರಿದ ತೃತೀಯರಂಗ ರಾಷ್ಟ್ರೀಯ ಪ್ರಗತಿಪರ ಐಕ್ಯರಂಗ (ಯುಎನ್‌ಪಿಎ)ಇತ್ಯಾದಿಗಳು ರಾಷ್ಟ್ರಪತಿ ಚುನಾವಣೆ ನಿಮಿತ್ತ ನಡೆಸುವ ರಾಜಕೀಯ ಆಟ ಖೇದಕರ ಎಂದು ಗೌಡ ಅಳಲುತೋಡಿಕೊಂಡರು.

ತೃತೀಯರಂಗ ಯುಎನ್‌ಪಿಎಗೆ ಜೆಡಿಎಸ್‌ಪಕ್ಷ ಹಾಗೂ ಅಧ್ಯಕ್ಷನಾದ ನನಗೂ ಆಹ್ವಾನ ಬಂದಿತ್ತು, ಆದರೆ ನಾನು ಅವರೊಂದಿಗೆ ಪಾಲ್ಗೊಳ್ಳಲು ಇಚ್ಛಿಸುವುದಿಲ್ಲ. ಅವರ ಸಭೆಗೂ ಆಹ್ವಾನವಿದೆ. ಆದರೆ ಭಾಗವಹಿಸಲಾರೆ ಎಂದವರು ಖಚಿತಪಡಿಸಿದ್ದಾರೆ.

ರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸಲು ನನಗೂ ಆಹ್ವಾನಬಂದಿತ್ತು ಆದರೆ ನಾನದರಲ್ಲಿ ಆಸಕ್ತನಲ್ಲ ಎಂದು ದೇವೆಗೌಡ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ರಾಷ್ಟ್ಪತಿ ಆಯ್ಕೆ ಸರ್ವಸಮ್ಮತ ರೀತಿಯಲ್ಲಿ, ರಾಜಕೀಯ ರಹಿತವಾಗಿ ನಡೆಸಿ ಹುದ್ದೆಯ ಗೌರವ ಪಾಲಿಸಬೇಕೆಂದು ತಮ್ಮ ಮೌನ ಮುರಿದೆದ್ದ ದೇವೆಗೌಡ ದೇಶದ ಪ್ರಮುಖ ಪಕ್ಷ- ಮುಖಂಡರಲ್ಲಿ ವಿನಂತಿಸಿದ್ದಾರೆ.
ಮತ್ತಷ್ಟು
ಮಳೆಗೆ ಸಾವು 200- ಪ್ರಧಾನಿ ಸಮೀಕ್ಷೆ
ನಾಲ್ವರು ಹರ್ಕತ್‌ ಉಲ್ ಕುಖ್ಯಾತರ ಸೆರೆ
ಇಂದು ಶೆಖಾವತ್ ನಾಮಪತ್ರ
ಪ್ರತಿಭಾ ಪರ ಶಿವಸೇನೆ-ಎನ್‌ಡಿಎ ಗೊಂದಲ
ಮಳೆ:ರಾಜ್ಯವೂ ಸೇರಿ ಸಾವಿನ ಸಂಖ್ಯೆ 126
ದೇರಾ ಗುರು ಬಂಧನಕ್ಕೆ ಪ್ರತಿಭಟನೆ