ರಾಷ್ಟ್ರಪತಿ ಚುನಾವಣೆಗಾಗಿ ಬಿಜೆಪಿ ನೇತೃತ್ವದ ಎನ್‌ಡಿಎ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಉಪರಾಷ್ಟ್ರಪತಿ ಬೈರೋನ್‌ಸಿಂಗ್ ಶೆಖಾವತ್ ಅವರು ಇಂದು ನಾಮಪತ್ರಸಲ್ಲಿಸಿದರು.
ಎನ್‌ಡಿಎ ಮಿತ್ರಪಕ್ಷಗಳಾದ ತೃಣಮೂಲ ಕಾಂಗ್ರೆಸ್ ಹಾಗೂ ಶಿವಸೇನೆಯ ಮುಖ್ಯಸ್ಥರ ಗೈರುಹಾಜರಾಗಿದ್ದುದು ವಿಶೇಷವಾಗಿತ್ತು. ನಿರ್ಧರಿತ ವಿಧಾನದಲ್ಲೇ ಶೆಖಾವತ್ ನಾಮಪತ್ರ ಪ್ರಕ್ರಿಯೆ ಪೂರ್ಣಗೊಂಡಿದೆ.
ಈ ಸಂದರ್ಭದಲ್ಲಿ ಕಾಂಗ್ರೆಸ್‌ನಿಂದ ಅಮನಾತುಗೊಂಡ ನಾಯಕ ಕೆ.ನಟ್ವರ್ ಸಿಂಗ್,ಜಮ್ಮುಕಾಶ್ಮೀರದಲ್ಲಿ ಕಾಂಗ್ರೆಸ್ ಮಿತ್ರಪಕ್ಷವಾಗಿರುವ ಫ್ಯಾಂಥರ್ಸ್ ಪಕ್ಷದ ಭೀ ಮ್ ಸಿಂಗ್ ಉಪಸ್ಥಿತರಿದ್ದರು.
ಶೆಖಾವತ್ ಅವರು ನಾಮಪತ್ರದ 2 ಕಡತಗಳನ್ನು ಸಲ್ಲಿಸಿದರು. ಈ ಮೂಲಕ ಜುಲೈ 19ರಂದು ಜರುಗಲಿರುವ ಮತದಾನದಲ್ಲಿ ಯುಪಿಎ ಅಭ್ಯರ್ಥಿ ಪ್ರತಿಭಾ ಪಾಟೀಲ್ ಅವರಿಗೆ ನೇರ ಸ್ಪರ್ಧೆ ನೀಡಲಿದ್ದಾರೆ.
ಭೈರೋನ್ ಸಿಂಗ್ ಶೆಖಾವತ್ ಅವರಿಗೆ ಎಲ್ಲಾ ಪಕ್ಷಗಳಲ್ಲೂ ಗೆಳೆಯರಿರುವುದರಿಂದ ಪ್ರತಿಭಾ ಪಾಟೀಲ್ ಅವರಿಗೂ ಈ ಸ್ಪರ್ಧೆ ಸ್ವಲ್ಪ ಕಠಿಣವಾಗಲಿದೆ.
ನಾಮಪತ್ರ ಸಲ್ಲಿಸುವ ವೇಳೆ ಎನ್‌ಡಿಎ ನಾಯಕಿ ಸುಷ್ಮಾ ಸ್ವರಾಜ್ , ನೀಲಂ ಸಂಜೀವ ರೆಡ್ಡಿ ಉಪಸ್ಥಿತರಿದ್ದರು.
ಆದರೆ ಮರಾಠಿಗರ ಪರವಾಗಿರುವ ಶಿವಸೇನೆ ಈ ಮೊದಲೇ ಪ್ರತಿಭಾ ಪಾಟೀಲ್ ಪರ ಒಲವು ಸೂಚಿಸಿತ್ತಾದರೂ, ಇಂದು ತನ್ನ ಅಂತಿಮ ನಿಲುವು ಪ್ರಕಟಿಸುವುದಾಗಿ ತಿಳಿಸಿತ್ತು. ಆದರೆ ಇಂದು ಗೈರು ಹಾಜರಾಗಿತ್ತು. ಅದೇ ರೀತಿ ಮಮತಾ ಬ್ಯಾನರ್ಜಿ ನಾಯಕತ್ವದ ತೃಣಮೂಲ ಕಾಂಗ್ರೆಸ್ ಪ್ರಾತಿನಿಧ್ಯವೂ ಇರಲಿಲ್ಲ.
|