ಬಿಜೆಪಿ ಮುಖಂಡ ಗುಜರಾತಿನ ಮಾಜಿ ಗೃಹಮಂತ್ರಿ ಹರೇನ್ ಪಾಂಡ್ಯ ಹತ್ಯಾಪ್ರಕರಣ ಒಂಬತ್ತು ಮಂದಿ ಆರೋಪಿಗಳಿಗೆ ಅಹಮ್ಮದಾಬಾದ್ 'ಪೊಟಾ'ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.
ಒಂಬತ್ತು ಜನರಲ್ಲದೆ, ಇತರ ಇಬ್ಬರಿಗೆ ಏಳು ವರ್ಷ ಹಾಗೂ 1ರಿಂದ 5 ವರ್ಷಗಳ ಶಿಕ್ಷೆಯನ್ನೂ ಪೊಟಾ(ಭಯೋತ್ಪಾದನಾ ತಡೆ ಕಾಯ್ದೆ)ನ್ಯಾಯಾಲಯ ವಿಧಿಸಿದೆ.
ಬಿಜೆಪಿ ಮುಖಂಡ ಹರೇನ್ ಪಾಂಡ್ಯ ಅವರನ್ನು 2003 ಮಾರ್ಚ್ 26ರಂದು ಪ್ರಸ್ತುತ ಜೀವಾವಧಿ ಶಿಕ್ಷೆಗೀಡಾದ ಆರೋಪಿಗಳು , ಕುಖ್ಯಾತ ಹಂತಕ ಅಸ್ಗರ್ ಆಲಿ ಎಂಬಾತನೊಂದಿಗೆ ಸೇರಿ ಹತ್ಯೆ ನಡೆಸಿದ್ದರು.
ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ಅವರ ಬೆಂಬಲಿಗರಾಗಿದ್ದ ಹರೇನ್ ಅವರನ್ನು ಗೋಧ್ರಾ ಹತ್ಯಾಕಾಂಡ, ಗಲಭೆಗೆ ಪ್ರತೀಕಾರವಾಗಿ ಅಸ್ಗರ್ ಅಲಿಯ ಸೂಚನೆಯಂತೆ 12 ಜನ ತಂಡ ಕೊಲೆಗೈದಿತ್ತು. ಈ ಕುರಿತು ಸಿಬಿಐ ವಿಸ್ತೃತ ತನಿಖೆ ನಡೆಸಿ ಆರೋಪ ಪಟ್ಟಿಸಲ್ಲಿಸಿತ್ತು.
|