ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ಸೋನಿಯಾಗೆ ಝಾನ್ಸಿರಾಣಿ ವೇಷ!
ರಾಜಕಾರಣಿಗಳಿಗೆ ಹಿಂದೂ ದೇವದೇವತೆಗಳು, ಇತಿಹಾಸದ ಉದಾತ್ತ ವ್ಯಕ್ತಿಗಳ ವೇಷತೊಡಿಸಿ ವಿಶೇಷ ಪ್ರಚಾರ ಗಳಿಸುವುದು ಇದೀಗ ದೇಶದಲ್ಲಿ ಸಾಂಕ್ರಾಮಿಕವಾಗಿ ಹರಡುತ್ತಿದೆ.

ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಮೊರದಾಬಾದ್‌ನ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಕಚೇರಿಯಲ್ಲಿ ಸೋನಿಯಾ ಮುಖ ಹಾಗೂ ದುರ್ಗಾದೇವತೆಯ ದೇಹ ಹೊಂದಿದ ಭಾವಚಿತ್ರವನ್ನು ಗೋಡೆ ತಗುಲಿಸಿ ಪೂಜಿಸಿದ್ದರು.

ಇದೀಗ ಜಬಲ್ಪುರ್‌ ಕಾಂಗ್ರೆಸಿಗರು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ಝಾನ್ಸಿ ರಾಣಿ ಲಕ್ಷ್ಮೀಬಾಯಿಯಾಗಿ ಚಿತ್ರಿಸಿದ್ದಾರೆ. ಅಲ್ಲಿನ ಭಿತ್ತಿ ಚಿತ್ರದಲ್ಲಿ ಇಂತಹ ಚಿತ್ರಣ ಅಳವಡಿಸಲಾಗಿದೆ.

ಝಾನ್ಸಿರಾಣಿ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದಾಖಲಿರುವ ವೀರವನಿತೆ. ಝಾನ್ಸಿರಾಣಿ ಎಂದರೆ ದಿಟ್ಟ ಮಹಿಳೆ,ಆದರ್ಶ ಭಾರತೀಯನಾರಿಯ ಪ್ರತೀಕವಾಗಿ ಪರಿಗಣಿಸಲಾಗುತ್ತಿದೆ. ಇದೀಗ ಸೋನಿಯಾ ಅವರನ್ನು ಝಾನ್ಸಿ ಪೋಷಾಕಿನಲ್ಲಿ ಚಿತ್ರಿಸಿರುವುದು ವಿವಾದಕ್ಕೀಡಾಗಲಿದೆ.
ಬಿಜೆಪಿ ಮುಖಂಡರು ವಸುಂಧರಾ ರಾಜೆಯನ್ನು ದೇವತೆಯಾಗಿ ಚಿತ್ರಿಸಿ ಕ್ಯಾಲೆಂಡರ್ ಪ್ರಕಟಿಸಿದ ಕುರಿತು ಮೊಕದ್ದಮೆ ಎದುರಿಸುತ್ತಿರುವಂತೆಯೇ, ಇತ್ತ ಉತ್ತರ ಪ್ರದೇಶದ ಕಾಂಗ್ರೆಸ್ ಕಾರ್ಯಕರ್ತರು ರಾಷ್ಟ್ರೀಯ ನಾಯಕಿ ಸೋನಿಯಾರನ್ನು ದುರ್ಗಾದೇವಿಗೆ ಹೋಲಿಸಿದ್ದಾರೆ.

ಇತ್ತೀಚೆಗೆ ಉತ್ತರ ಪ್ರದೇಶದ ಮೊರಾದಾಬಾದ್‌ ಭಿತ್ತಿಚಿತ್ರದಲ್ಲಿ, ದುರ್ಗೆಯಂತೆ ಸೋನಿಯಾ ಅವರನ್ನು ಚತ್ರಿಸಿದ್ದು, ಈ ಕಾರಣಕ್ಕಾಗಿ ಕಾಂಗ್ರೆಸ್‌ ಹೈಕಮಾಂಡ್ ಸ್ಥಳೀಯ ಘಟಕದ ಅಧ್ಯಕ್ಷರನ್ನು ಶಿಸ್ತಿಗೊಳಪಡಿಸಿದ ಮಾಹಿತಿತಿ ಇತ್ತು.

ಈ ವಿಷಯದಲ್ಲಿ ಬಿಜೆಪಿಯೂ ಹಿಂದೆ ಬಿದ್ದಿಲ್ಲ.ಮೊದಲ ಪ್ರಕರಣ ಬಿಜೆಪಿಯಿಂದ ನಡೆದಿತ್ತು.ರಾಜಸ್ತಾನದ ಮುಖ್ಯಮಂತ್ರಿ ವಸುಂಧರಾ ರಾಜೆಯವರನ್ನು ದೇವರಾಗಿ ಚಿತ್ರಿಸಲಾಗಿತ್ತು. ಇದಕ್ಕೆ ಕಾರಣರಾದ ಶಾಸಕರಂತೂ ಮೊಕದ್ದಮೆ ಎದುರಿಸುತ್ತಿದ್ದಾರೆ.

ಇದೀಗ ಝಾನ್ಸಿ ರಾಣಿ ಕುರಿತಾದ ಈ ಭಾವಚಿತ್ರದ ಕುರಿತು ಜನರು ಹೇಗೆ ಪ್ರತಿಕ್ರಿಯಿಸುತ್ತಾರೆ, ನ್ಯಾಯಾಲಯ, ಕಾನೂನುಕಟ್ಟಳೆ ಇದೆಯೇ ಎಂದು ಕಾದುನೋಡಬೇಕಷ್ಟೇ.
ಮತ್ತಷ್ಟು
ಕನ್ನಡದಲ್ಲಿ ಕಲಿಸಲು ಶಾಲೆಗಳಿಗೆ ಆದೇಶ
ಹರೇನ್ ಪಾಂಡ್ಯ ಹಂತಕರಿಗೆ ಜೀವಾವವಧಿ
ಶೆಕಾವತ್ ನಾಮಪತ್ರ:ತೃಣ-ಸೇನೆ ಗೈರು
'ರಾಷ್ಟ್ರಪತಿ ಘನತೆ'ಕಾಪಾಡಿ-ದೇವೇಗೌಡ
ಮಳೆಗೆ ಸಾವು 200- ಪ್ರಧಾನಿ ಸಮೀಕ್ಷೆ
ನಾಲ್ವರು ಹರ್ಕತ್‌ ಉಲ್ ಕುಖ್ಯಾತರ ಸೆರೆ