ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ಶಿವಸೇನೆ ಪ್ರತಿಭಾಪಾಟೀಲ್‌ಗೆ ಬೆಂಬಲ
webdunia
ಬಿಜೆಪಿ ಬೆಂಬಲಿತ ಎನ್‌ಡಿಎ ಒಕ್ಕೂಟದ ಸದಸ್ಯ ಪಕ್ಷವಾದ ಶಿವಸೇನೆ ರಾಷ್ಟ್ರಪತಿ ಚುನಾವಣೆಗಾಗಿ ಕಾಂಗ್ರೆಸ್‌ಎಡಪಂಥೀಯ ಒಕ್ಕೂಟ ಯುಪಿಎ ಅಭ್ಯರ್ಥಿ ಪ್ರತಿಭಾ ಪಾಟೀಲ್‌ ಅವರನ್ನು ಬೆಂಬಲಿಸಲು ನಿರ್ಧರಿಸಿದೆ.

ಶಿವಸೇನೆಗೆ 21,590 ಮೌಲ್ಯದ ಮತಗಳಿವೆ. ಪ್ರಮುಖ ಮುಖಂಡರು ಈ ನಿರ್ಣಯದಿಂದ ಅಸಮಾಧಾನಗೊಂಡಿದ್ದಾರೆ. ಆದರೆ ಎನ್‌ಡಿಎ ಭಾಂದ್ಯವ ಅಬಾಧಿತ ಎನ್ನಲಾಗಿದೆ.

ಶಿವಸೇನೆ ಮರಾಠಿ ಒಲವು ಹೊಂದಿರುವುದನ್ನು ರಾಷ್ಟ್ರಪತಿ ಚುನಾವಣೆಯಲ್ಲಿ ದೃಢಪಡಿಸಿದಂತಾಗಿದೆ. ಆದರೆ ರಾಷ್ಟ್ರಪತಿ ಹುದ್ದೆಯಂತಹ ಸರ್ವೋಚ್ಛ ಪದವಿ ಭಾಷೆ, ಜಾತಿ ಪ್ರದೇಶ, ಲಿಂಗ ತಾರತಮ್ಯಗಳಿಗೆ ಅತೀತ ವಾಗಿಬೇಕೆಂಬ ನೀತಿ ಬದಲಾಗಿರುವಂತಿದೆ.

ಶಿವಸೇನಾ ಮುಖ್ಯಸ್ಥ ಬಾಳಾ ಸಾಹೇಬ್ ಠಾಕ್ರೆ ಅವರು ತಮ್ಮ ಪಕ್ಷದ ಜನಪ್ರತಿನಿಧಿಗಳಲ್ಲಿ ಯುಪಿಎ ಅಭ್ಯರ್ಥಿ ಪ್ರತಿಭಾ ಪಾಟೀಲರನ್ನು ಬೆಂಬಲಿಸಲು ತಿಳಿಸಿದ್ದಾರೆ.

ಪ್ರತಿಭಾ ಪಾಟೀಲ್‌ ಅವರು ಮಹಾರಾಷ್ಟ್ರದ ಜಲಗಾಂವ್‌ ಪ್ರದೇಶದ ಮೂಲನಿವಾಸಿ ಎಂಬುದೇ ಬೆಂಬಲಕ್ಕೆ ಕಾರಣ ಎಂದು ಠಾಕ್ರೆ ತಿಳಿಸಿದ್ದಾರೆ.ಆದರೆ ಬದ್ಧ ವಿರೋಧಿಗಳಾದ ಎಡರಂಗಗಳಿರುವ ಕಾಂಗ್ರೆಸ್ ಬೆಂಬಲಿತ ಯುಪಿಎ ಅಭ್ಯರ್ಥಿ ಎಂಬುದನ್ನೂ ಮರಾಠಿಗಳು ಎಂಬ ಕಾರಣಕ್ಕಾಗಿ ಠಾಕ್ರೆ ಲಘುವಾಗಿ ಸ್ವೀಕರಿಸಿದ್ದಾರೆ.

ಠಾಕ್ರೆ ಹೇಳಿಕೆಯಂತೆ ಬೈರೋನ್ ಸಿಂಗ್ ಶೆಖಾವತ್ ಎನ್‌ಡಿಎ ಅಭ್ಯರ್ಥಿ ಅಲ್ಲ, ಅವರು ಪಕ್ಷೇತರ ಅಭ್ಯರ್ಥಿ.ಪಕ್ಷೇತರ ಅಭ್ಯರ್ಥಿಯಾಗಿದ್ದರೆ ಎಲ್ಲಾ ಪಕ್ಷಗಳಿಂದ ಮತಗಳಿಸಬಹುದು, ಬಿಜೆಪಿ ಅಭ್ಯರ್ಥಿಯಾದರೆ ಈ ಅವಕಾಶವಿಲ್ಲ, ಶಿವಸೇನೆ ಇಂತಹ ಸೋದೆಬಾಝಿ (ಚೌಕಾಸಿ)ಯನ್ನು ಇಷ್ಟಪಡುವುದಿಲ್ಲ ಎಂದು ಠಾಕ್ರೆ ತಿಳಿಸಿದ್ದಾರೆ.

ಶಿವಸೇನೆಯ ಪ್ರಸ್ತುತ ನಿಲುವು ಎನ್‌ಡಿಎ ಹಾಗೂ ಬೆಂಬಲಿತ ಪಕ್ಷೇತ ಅಭ್ಯರ್ಥಿ ಬೈರೋನ್ ಸಿಂಗ್ ಶೆಖಾವತ್ ಅವರಿಗೆ ಪ್ರತಿಕೂಲವಾಗಿ ಪರಿಣಮಿಸಲಿದೆ.
ಮತ್ತಷ್ಟು
ಸೋನಿಯಾಗೆ ಝಾನ್ಸಿರಾಣಿ ವೇಷ!
ಕನ್ನಡದಲ್ಲಿ ಕಲಿಸಲು ಶಾಲೆಗಳಿಗೆ ಆದೇಶ
ಹರೇನ್ ಪಾಂಡ್ಯ ಹಂತಕರಿಗೆ ಜೀವಾವವಧಿ
ಶೆಕಾವತ್ ನಾಮಪತ್ರ:ತೃಣ-ಸೇನೆ ಗೈರು
'ರಾಷ್ಟ್ರಪತಿ ಘನತೆ'ಕಾಪಾಡಿ-ದೇವೇಗೌಡ
ಮಳೆಗೆ ಸಾವು 200- ಪ್ರಧಾನಿ ಸಮೀಕ್ಷೆ