ಮುಸ್ಲೀಮ್ ವಿರೋಧಿ ಎಂಬ ಹಣೆ ಪಟ್ಟಿ ಹೊಂದಿರುವ ಬರಹಗಾರ ಸಲ್ಮಾನ್ ರಶ್ದಿಗೆ ನೈಟ್ ಗೌರವ ನೀಡಿರುವುದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮಜರುಗಿಸಲು ನಿರ್ಧಾರ ಸ್ವೀಕರಿಸುವಂತೆ ಪಾಕಿಸ್ತಾನ ಇಸ್ಲಾಂ ರಾಷ್ಟ್ರಗಳಿಗೆ ವಿನಂತಿಸಿದೆ.
ಸೈತಾನನ ಗೀತೆಗಳು (ಸೆತಾನಿಕ್ ವರ್ಸಸ್) ಎಂಬ ಗ್ರಂಥದ ಮೂಲಕ ಮುಸ್ಲೀಮರ ಫತ್ವಾಗೆ ಕಾರಣಮಾದ ಸಲ್ಮಾನ್ ರಶ್ದಿಗೆ ಇತ್ತೀಚೆಗೆ ಸಾಹಿತ್ಯರಂಗದ ಪ್ರತಿಷ್ಠಿತ ನೈಟ್‌ಹುಡ್ ಗೌರವ ನೀಡಿರುವುದು ಮುಸ್ಲೀಮ್‌ರ ಕೆಂಗಣ್ಣಿಗೆ ಕಾರಣವಾಗಿತ್ತು.
ಆದರೆ ಪಾಕಿಸ್ತಾನವನ್ನು ಹೊರತು ಪಡಿಸಿದರೆ ಇತರ ಇಸ್ಲಾಮಿಕ್ ರಾಷ್ಟ್ರಗಳೆಲ್ಲಾ ಮೌನಪಾಲಿಸಿದ್ದವು. ರಶ್ದಿಗೆ ಫತ್ವಾ (ಹತ್ಯೆ) ಹೊರಡಿಸಿದ್ದ ದೊರೆ ಅಯಾತುಲ್ಲಾ ಖೊಮೇನಿಯ ರಾಷ್ಟ್ರ ಇರಾನ್‌ನಿಂದ ಕೂಡ ನಿರೀಕ್ಷಿಸಿದ ಪ್ರತಿರೋಧ ಕಂಡುಬಂದಿಲ್ಲ.
ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಇಸ್ಲಾಮಿ ರಾಷ್ಟ್ರಗಳಲ್ಲಿ 'ರಶ್ದಿ ವಿಷಯವನ್ನು ಗಂಭೀರವಾಗಿ ಪರಿಗಣಿಸು'ವಂತೆ ವಿನಂತಿಸಿದೆ. ಪಾಕ್ ವಿದೇಶಾಂಗ ಖಾತೆಯ ವಕ್ತಾರ ತಾಸ್ನಿಂ ಅಸ್ಲಾಂ ಈ ಕುರಿತು ಮಾಹಿತಿಯನ್ನು ದೃಢಪಡಿಸಿದ್ದಾರೆ.
ಪ್ರಸಕ್ತ ಪಾಕಿಸತಾನವೇ ಇತರ ರಾಷ್ಟ್ರಗಳನ್ನು ಪ್ರಚೋದಿಸುತ್ತಿದ್ದು, ಭಾರತಸಂಜಾತ ರಶ್ದಗೆ ಬ್ರಿಟನ್ ನೀಡಿದ ನೈಟ್ ಗೌರವವನ್ನು ವಿರೋಧಿಸುತ್ತಿದೆ. ಆತನ ಕುಖ್ಯಾತ ಬರಹಗಳನ್ನು ಈ ಗೌರವದಿಂದ ಪುರಸ್ಕರಿಸಿದಂತಾಗಿ ಪಾಕಿಸ್ತಾನ ಅಭಿಪ್ರಾಯಪಟ್ಟಿದೆ.
|