ಥಾಯ್ಲೆಂಡ್ ಪ್ರಧಾನಿ ಸುರಯೂದ್ ಚುಲನಾಟ್ ಅವರು ತ್ರಿದಿನ ಕಾರ್ಯಕ್ರಮಗಳ ಅಂಗವಾಗಿ ಕಳೆದ ರಾತ್ರಿ ದೆಹಲಿ ತಲುಪಿದ್ದಾರೆ.
ಥಾಯ್ ಪ್ರಧಾನಿಯನ್ನು ರಾಷ್ಟ್ರಪತಿ ಭವನದಲ್ಲಿ ಸಾಂಪ್ರದಾಯಿಕ ಕಾರ್ಯಕ್ರಮಗಳೊಂದಿಗೆ ಹೃದ್ಯವಾಗಿ ಸ್ವಾಗತಿಸಲಾಯಿತು.
ಸುರಯೂದ್ ಅವರು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ವಿದೇಶಾಂಗ ಮಂತ್ರಿ ಪ್ರಣಬ್ ಮುಖರ್ಜಿ,ವಿಪಕ್ಷ ನಾಯಕ ಎಲ್.ಕೆ.ಅಡ್ವಾಣಿ ಮುಂತಾದವರನ್ನು ಭೇಟಿ ಮಾಡಿ ಚರ್ಚಿಸುವ ಕಾರ್ಯಕ್ರಮವಿದೆ.
ಪ್ರಸ್ತುತ ಭೇಟಿಯ ವೇಳೆ ಭಾರತ ಹಾಗೂ ಥಾಯ್ಲೆಂಡ್ ಉಭಯತರ ಆಸಕ್ತಿಯ ವಿಷಯಗಳ ಕುರಿತ ವಿವಿಧ ಒಪ್ಪಂದಗಳಿಗೆ ಎರಡೂ ದೇಶಗಳ ನಾಯಕರು ಸಹಿ ಹಾಕುವರು ಎಂದು ನಿರೀಕ್ಷಿಸಲಾಗಿದೆ.
|