ಜಾಗತಿಕವಾಗಿ ಇಂದಿನಿಂದ ಮಾದಕದ್ರವ್ಯ ದುರ್ಬಳಕೆ,ಅಕ್ರಮ ಸಾಗಣೆ ಜಾಗೃತಿ ಆಂದೋಲನವನ್ನು ಒಂದು ವಾರಕಾಲ ಆಚರಿಸಲಾಗುತ್ತಿದೆ.
ವಿಶ್ವಸಂಸ್ಥೆಯ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ವಾರದವಧಿಯ ಕಾರ್ಯಕ್ರಮದಲ್ಲಿ ಮಾದಕದ್ರವ್ಯ, ಅಕ್ರಮ ಸಾಗಣೆ ಕುರಿತ ಜನ ಜಾಗೃತಿ ಆಂದೋಲನ ನಡೆಸಲಾಗುವುದು.
ಕಾರ್ಯಕ್ರಮಗಳ ಅಂಗವಾಗಿ ದೆಹಲಿಯಲ್ಲಿ ಇಂದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಗರವಾಸಿಗಳಲ್ಲಿ ಜಾಗೃತಿ ಮೂಡಿಸಲಾಗಿದೆ.
ಶಾಲಾ ಮಕ್ಕಳು ಇಂಡಿಯಾ ಗೇಟ್ ಬಳಿ ಸಾಮೂಹಿಕ ಯೋಗ ಸಾಧನೆ, ದೇಹದಾರ್ಡ್ಯ ಪ್ರದರ್ಶನ ನಡೆಸಿದರು. ಇದೇ ಸಂದರ್ಭದಲ್ಲಿ ಜನಜಾಗೃತಿ ಓಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
|