ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
'ಶೆಖಾವತ್'ಗಳ ಯುದ್ಧವಲ್ಲ-ಬೈರೋನ್
webdunia
ರಾಷ್ಟ್ರಪತಿ ಚುನಾವಣೆ ಎಂದರೆ ಶೆಖಾವತ್‌(ರಜಪೂತ ಕ್ಷತ್ರಿಯರು)ಗಳ ನಡುವಿನ ಹೋರಾಟವಲ್ಲ,ಏಕೆಂದರೆ ಪ್ರತಿಭಾ ಪಾಟೀಲ್ ಶೆಕಾವತ್‌ ಅಲ್ಲ - ಎನ್‌ಡಿಎ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಉಪರಾಷ್ಟ್ರಪತಿ ಭೈರೋನ್ ಸಿಂಗ್ ಶೆಕಾವತ್ ಹೇಳಿಕೆ ಇದು.

ಕಾಂಗ್ರೆಸ್ ಎಡರಂಗ ಕೂಟ ಯುಪಿಎ ಅಭ್ಯರ್ಥಿ ಪ್ರತಿಭಾ ಪಾಟೀಲ್ ತಾನು ನಾಮಪತ್ರ ಸಲ್ಲಿಸಿದ ತಕ್ಷಣ ನೀಡಿದ ಮಾಧ್ಯಮ ಹೇಳಿಕೆಯಲ್ಲಿ ಬೈರೋನ್ ಸಿಂಗ್ ಅವರನ್ನು ಗುರಿಯಾಗಿರಿಸಿ ರಾಷ್ಟ್ರಪತಿ ಆಯ್ಕೆ ಚುನಾವಣೆ'ಶೆಕಾವತ್ ಹಾಗೂ ಶೆಕಾವತ್ ನಡುವಿನ ಸೆಣಸಾಟ 'ಎಂದಿದ್ದರು.

ಪ್ರತಿಭಾ ಪಾಟೀಲ್‌ ಅವರ ಹೇಳಿಕೆ ಹಾಗೂ ಅವರನ್ನು ಕ್ಷತ್ರಿಯ ರಜಪೂತ ವಂಶದವರೆಂದು ಪ್ರಚಾರ ನೀಡುತ್ತಿರುವ ಹಿನ್ನೆಲೆಯಲ್ಲಿ , ಉಪರಾಷ್ಟ್ರಪತಿ ಹುದ್ದೆಯಲ್ಲಿರುವ ಭೈರೋನ್ ಸಿಂಗ್ ಶೆಖಾವತ್ ಅವರ ಹೇಳಿಕೆ ಗಮನಾರ್ಹವಾಗಿದೆ.ರಾಷ್ಟ್ರಪತಿ ಚುನಾವಣೆ ಜಾತಿ ರಾಜಕೀಯದ ತಿರುವು ಪಡೆಯುವಂತಿದೆ.

ಪ್ರತಿಭಾ ಪಾಟೀಲ್ ಶೆಕಾವತ್ ಅಲ್ಲ ( ಮಹಾರಾಷ್ಟ್ರ ಮೂಲದ ಪ್ರತಿಭಾ ಅವರು ರಜಪೂತರಾದ ದೇವಿಸಿಂಗ್ ಶೆಕಾವತ್‌‌ರನ್ನು ವಿವಾಹವಾಗಿದ್ದರು.)ಅವರ ಎಂದು ಹೇಳುವ ಮೂಲಕ , ಪ್ರತಿಭಾ ಪಾಟೀಲ್ ತನಗೆ ಸಮಾನ ಪ್ರತಿಸ್ಪರ್ಧಿಯಲ್ಲ ಎಂಬ ಸೂಚನೆ ನೀಡಿದ್ದಾರೆ.

ಪತಿಭಾ ರಜಪೂತ ವಂಶಜೆ ಎನ್ನುವುದು ನನ್ನ ಹೇಳಿಕೆ ಅಲ್ಲ, ಆಕೆ ಅಥವಾ ಆಕೆಯ ವಿರುದ್ಧ ಹೇಳುವುದಿಲ್ಲ, ಕೇಳುವುದಿಲ್ಲ, ಆದರೆ ಕಾಂಗ್ರೆಸ್ ಪ್ರಚಾರವಾದ 'ಶೆಖಾವತ್‌ಗಳ ಹೋರಾಟ'ಎಂಬುದರ ಕುರಿತು ಪ್ರತಿಕ್ರಿಯಿಸುತ್ತಿದ್ದೇನೆ, ಕೊನೆಗೂ ಕಾಂಗ್ರಸೆ ಶೆಖಾವತ-ಕ್ಷತ್ರಿಯರನ್ನು ಗೌರವಿಸಿದೆ, ಇದಕ್ಕಾಗಿ ಖುಷಿಪಡುತ್ತೇನೆ ಎಂದು ಕಟಕಿದರು.
ಮತ್ತಷ್ಟು
ಮಾದಕದ್ರವ್ಯ ದರ್ಬಳಕೆ ತಡೆ ಆಂದೋಲನ
ಥಾಯ್ಲೆಂಡ್ ಪ್ರಧಾನಿಯ ಭಾರತ ಭೇಟಿ
ರಶ್ದಿ:ಇಸ್ಲಾಮಿಕ್ ರಾಷ್ಟ್ರಗಳ ನಿರ್ಧಾರ
ಶಿವಸೇನೆ ಪ್ರತಿಭಾಪಾಟೀಲ್‌ಗೆ ಬೆಂಬಲ
ಸೋನಿಯಾಗೆ ಝಾನ್ಸಿರಾಣಿ ವೇಷ!
ಕನ್ನಡದಲ್ಲಿ ಕಲಿಸಲು ಶಾಲೆಗಳಿಗೆ ಆದೇಶ