ಪಕ್ಷದ ಶಿಸ್ತುಕ್ರಮಕ್ಕೊಳಗಾದ ಹಿರಿಯಕಾಂಗ್ರೆಸಿಗ ರಾಜ್ಯಸಭಾ ಸದಸ್ಯರೂ ಆಗಿರುವ ನಟ್ವರ್ ಸಿಂಗ್ ಅವರ ರಾಜ್ಯಸಭಾ ಸದಸ್ಯತ್ವವನ್ನು ರದ್ದುಪಡಿಸಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ.
ಯುಪಿಎ ಬೆಂಬಲಿತ ರಾಜ್ಯಸಭಾಸದಸ್ಯರಾಗ್ರುವ ನಟ್ವರ್‌ಸಿಂಗ್ ಅವರು ಕಳೆದ ದಿನ ಎನ್‌ಡಿಎ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಉಪರಾಷ್ಟ್ರಪತಿ ಬೈರೋನ್ ಸಿಂಗ್ ಶೆಕಾವತ್ ಅವರೊಂದಿ ಕಾಣಿಸಿಕೊಂಡಿರುವುದು ಕಾಂಗ್ರೆಸ್ ಸಿಟ್ಟಿಗೆ ಕಾರಣವಾಗಿದೆ.
ನಟ್ವರ್ ಸಿಂಗ್ ಅವರು ಬೈರೋನ್ ಸಿಂಗ್ ಅವರ ನಾಮಪತ್ರವನ್ನು ಬೆಂಬಲಿಸಿದ ಸೂಚಕರಲ್ಲೊಬ್ಬರಾಗಿದ್ದಾರೆ. ಇದೀಗ ಕಾಂಗ್ರೆಸ್ ಮನವಿಯು ರಾಜ್ಯಸಭಾಧ್ಯಕ್ಷರಾಗಿರುವ ಉಪರಾಷ್ಟ್ರಪತಿ ಬೈರೋನ್ ಸಿಂಗ್ ಶೆಕಾವತ್ ಅವರಿಗೇ ಸಲ್ಲಿಸಲಾಗಿದೆ.
ನಟ್ವರ್ ಅವರು ಇತ್ತೀಚೆಗೆ ಉತ್ತರ ಪ್ರದೇಶ ಚುನಾವಣೆಯಲ್ಲಿ ಸಮಾಜವಾದಿ ಪಕ್ಷಕ್ಕಾಗಿ ಪ್ರಚಾರ ನಡೆಸಿ ಪಕ್ಷಾಂತರ ಚಟುವಟಿಕೆಯಲ್ಲಿದ್ದಾರೆ ಎಂಬುದು ಕಾಂಗ್ರೆಸ್ ದೂರು. ಈ ಕಾರಣಕ್ಕಾಗಿ ನಟ್ವರ್‌ನ್ನು ಅನರ್ಹಗೊಳಿಸಲು ಆಗ್ರಹಿಸಲಾಗಿದೆ.
ಕಾಂಗ್ರೆಸ್ ಅಹವಾಲನ್ನು ಸ್ವತಃ ಬೈರೋನ್ ಸಿಂಗ್ ಪರಿಶೀಲಿಸಬೇಕಿದೆ. ಕ್ರಮಕೈಗೊಳ್ಳಬೇಕಿರುವುದು ತಮ್ಮ ನಾಮಪತ್ರ ಬೆಂಬಲಿಸಿದ ಸೂಚಕರಲ್ಲೊಬ್ಬರಾದ ನಟ್ವರ್ ಸಿಂಗ್ ವಿರುದ್ಧ ಎಂಬುದರಿಂದ ಪ್ರಕರಣ ಕುತೂಹಲ ಕೆರಳಿಸಿದೆ.
|