ರಾಜಧಾನಿ ದೆಹಲಿಯಲ್ಲಿ ರೋಗಿಗಳು ಇಂದು ಕಂಗಾಲು. ಇಲ್ಲಿನ ವೈದ್ಯರೆಲ್ಲಾ ಇಂದು ಪ್ರತಿಭಟನಾರ್ಥ ಬಂದ್ ಆಚರಿಸುತ್ತಿದ್ದಾರೆ.
ಖಾಸಗಿಯವರೂ ಬಂದ್‌ಗೆ ಬೆಂಬಲ ಸೂಚಿಸಿರುವುದರಿಂದ ತುರ್ತು ಸ್ಥಿತಿ ನಿರ್ಮಾಣವಾಗಿದೆ. ವಸತಿ ಪ್ರದೇಶದಲ್ಲಿ "ಖಾತೆ ಬದಲಾವಣೆ" ಶುಲ್ಕ , ಪಾರ್ಕಿಂಗ್ ಶುಲ್ಕ ಪಾವತಿಸಬೇಕೆಂಬ ಸರ್ಕಾರಿ ಆದೇಶ ವೈದ್ಯರನ್ನು ರೊಚ್ಚಿಗೆಬ್ಬಿಸಿದೆ.
ದೆಹಲಿಯಲ್ಲಿರುವ ಸುಮಾರು 35,000 ಮಂದಿ ವೈದ್ಯರು ಬಂದ್‌ನಲ್ಲಿ ಪಾಲ್ಗೊಳ್ಳುವರು. ವೈದ್ಯರ ಸಂಘ ಪ್ರಸ್ತುತ ಬಂದ್‌ಗೆ ಕರೆ ನೀಡಿತ್ತು. ಭಾರತೀಯ ವೈದ್ಯ ಸಂಘದ ಕರೆಯಂತೆ ಖಾಸಗಿಯವರೂ ಸಹಕರಿಸುವಂತೆ ಕೋರಲಾಗಿತ್ತು.
ಸಂಘದ ಕರೆಗೆ ಖಾಸಗಿ ವೈದ್ಯರು ಸಹಮತ ವ್ಯಕ್ತ ಪಡಿಸಿ ಬೆಂಬಲಿಸುತ್ತಿದ್ದಾರೆ. ರೋಗಿಗಳ ಸ್ಥಿತಿ ಇಂದು ಗಂಭೀರವಾಗಲಿದ್ದು,ಒಪಿಡಿ ವಿಭಾಗಗಳೂ ಬಂದ್ ಆಚರಿಸಲಿವೆ.
|