ಪಂಜಾಬ್‌ನ ದೇರಾ ಸಚ್ಚಾ ಸೌಧಾದ ಮುಖ್ಯಸ್ಥ ಗುರು ರಾಂ ರಹೀಂ ಗುರ್ಮಿಟ್ ಸಿಂಗ್ ಅವರು ಎರಡನೇ ಬಾರಿ ಕ್ಷಮಾಯಾಚನ ಮಾಡಿರುವ ಹಿನ್ನೆಲೆಯಲ್ಲಿ ಅಕಾಲ್ ತಖ್ತ್ ಸಭೆ ಸೇರಲಿದೆ.
ಪಂಜಾಬ್‌ನಲ್ಲಿ ಯಾದವೀ ಕಲಹಕ್ಕೆ ಕಾರಣನಾಗಿ ಭಾವನಾತ್ಮಕ ಪ್ರಚೋದನೆಗೆ ಕಾರಣರಾದರೆಂದು ದೇರಾ ಗುರುವಿನ ವಿರುದ್ಧ ಆರೋಪದಂತೆ ಬಂಧನಕ್ಕಾಗಿ ನ್ಯಾಯಾಲಯ ಆದೇಶಿಸಿತ್ತು.
ಈ ಆದೇಶವನ್ನು ಕಾರ್ಯಗತ ಗೊಳಿಸಲು ರಾಜ್ಯ ಪೊಲೀಸರು ಸರ್ಕಾರದ ಅನುಮತಿ ಕೋರಿದ್ದು, ಅದು ಪರಿಶೀಲನೆಯಲ್ಲಿರುವಂತೆಯೇ, ಜಾರಿಗಾಗಿ ಅಕಾಲ್ ತಖ್ತ್ ನೇತೃತ್ವ ಒತ್ತಾಯಿಸಿ ಪ್ರತಿಭಟನೆ ಮುಂದುವರಿಸಿದೆ.
ಇದೇ ಸಂದರ್ಭದಲ್ಲಿ ಆರೋಪ ಎದುರಿಸುತ್ತಿರುವ ದೇರಾ ಮುಖ್ಯಸ್ಥ ಗುರ್ಮಿತ್ ಸಿಂಗ್ ಎರಡನೇ ಬಾರಿ ಕಳೆದ ದಿನ ಕ್ಷಮೆಯಾಚಿಸಿದ್ದು, ಈ ಕುರಿತು ಚರ್ಚಿಸಲು ಅಖಾಲ್ ತಖ್ತ್ ಇಂದು ಸಭೆ ಸೇರಿಚರ್ಚಿಸಲಿದೆ.
ಡೇರಾ ಮುಖ್ಯಸ್ಥ ಬಾಬಾ ಗುರ್ಮಿಟ್ ರಾಂ ರಹೀಂ ಸಿಂಗ್ ಸಿಖ್ ಗುರುವಿನ ಕುರಿತಾಗಿ ಸಮುದಾಯದವರಿಗೆ ನೋವುಂಟು ಮಾಡುವಂತೆ ಪ್ರಕಟನೆ ನೀಡಿರುವುದೇ ಇಷ್ಟೆಲ್ಲಾ ಆವಾಂತರಗಳಿಗೆ ಕಾರಣವಾಗಿತ್ತು.
|