ಬಾಲಿವುಡ್ ನಟ ಅನಿಲ್ ಕಪೂರ್ ನಿರ್ಮಿಸುತ್ತಿರುವ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಕುರಿತು ಗಾಂಧಿ ಮೈ ಫಾದರ್ ಚಿತ್ರ ಇದೀಗ ದೇಶವ್ಯಾಪಿಯಾಗಿ ಕುತೂಹಲ ಕೆರಳಿಸಿದೆ.
ಮಹಾತ್ಮಾ ಕುರಿತ ಹಲವಾರು ಚಿತ್ರಗಳು ಈ ಮೊದಲು ತೆರೆ ಕಂಡಿದ್ದರೂ , ಮಹಾತ್ಮನಾದ ವ್ಯಕ್ತಿಯ ಖಾಸಗಿ ಕೌಟುಂಬಿಕ ಸನ್ನಿವೇಶಗಳ ಸಾಫಲ್ಯ-ವೈಫಲ್ಯಗಳನ್ನು ಈ ಚಿತ್ರದಲ್ಲಿ ಅನಾವರಣಗೊಳಿಸಲು ಪ್ರಯತ್ನಿಸಲಾಗುತ್ತಿದೆ.
ರಾಜಧಾನಿಯಲ್ಲಿ ನಿರ್ಮಾಪಕ ನಟ ಅನಿಲ್ ಕಪೂರ್ ಈ ಕುರಿತು ಮಾಹಿತಿ ನೀಡಿ ಗಾಂಧಿಜಿ ಪುತ್ರ ಹರಿಲಾಲ್ ಗಾಂಧಿಯವರು ಹಾಗೂ ಸ್ವತಃ ಮಹಾತ್ಮಾ ಅವರ ನಡುವಿನ ಸುಖ-ದುಃಖಸನ್ನಿವೇಶಗಳನ್ನು ಈ ಚುತ್ರದಲ್ಲಿ ಸೆರೆಹಿಡಿಯಲಾಗುತ್ತದೆ.
ಕಾರ್ಯಕ್ರಮದಲ್ಲಿ ಅಭಿನೇತ್ರಿಯರಾದ ಶೆಫಾಲಿ ಛೆಯಾ, ಭೂಮಿಕಾ ಚಾವ್ಲಾ,ನಟ ಅಕ್ಷಯ್ ಖನ್ನ,ನಿರ್ದೇಶಕ ಫಿರೋಜ್ ಅಬ್ಬಾಸ್ ಖಾನ್ ಮುಂತಾದವರಿದ್ದರು. ಗಾಂಧಿಜಿಯವರ ಪುತ್ರನ ಪಾತ್ರವನ್ನು ನಟ ಅಕ್ಷಯ್ ಖನ್ನಾ ನಿರ್ವಹಿಸಲಿದ್ದಾರೆ ಎನ್ನುವುದು ವಿಶೇಷ ಕುತೂಹಲ ಕೆರಳಿಸಿದೆ. ಗಾಂಧಿ ಪಾತ್ರಕ್ಕೆ ದರ್ಶನ್ ಜಾರಿವಾಲಾ ಜೀವ ತುಂಬುವರು.
ಚಿತ್ರದ ಚಿತ್ರೀಕರಣಕ್ಕಾಗಿ ದಕ್ಷಿಣ ಆಫ್ರಿಕಾ ಹಾಗೂ ಭಾರತದಲ್ಲಿ ಗಾಂಧಿಜಿಯವರ ಮಹತ್ವದ ಐತಿಹಾಸಿಕ ಹೆಜ್ಜೆಗುರುತುಗಳಿರುವ ಅಹ್ಮದಾಬಾದ್,ಬೋಯಿರ್ ಮತ್ತು ಮುಂಬೈಪ್ರದೇಶಗಳನ್ನು ಆರಿಸಲಾಗಿದೆ. ಗಾಂಧಿಜಿ ಅವರ ಕೌಟುಂಬಿಕ ಬದುಕಿನ ಚಿತ್ರಣವಾಗಿರುವುದರಿಂದ ಇದುವರೆಗಿನ ಸಿನಿಮಾಗಳಿಗಿಂತ ಭಿನ್ನ ಮಗ್ಗುಲು, ನೆರಳಲ್ಲಿದ್ದ ಭಾಗದ ಕುರಿತು ಇದು ಬೆಳಕು ಚೆಲ್ಲಲಿದೆ.
ಇದೇ ಕಾರಣದಿಂದ ಭಾರತೀಯರು ತೀವ್ರ ಉತ್ಕಟತೆಯಿಂದ ಈ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಮಹಾತ್ಮರಾಗಿರುವ ಗಾಂಧೀಜಿಯವರ ವೈಯಕ್ತಿಕ ಜೀವನದ ಕುರಿತು ಮತ್ತು ತಂದೆಯ ಕರ್ತವ್ಯವನ್ನು ನಿರ್ವಹಿಸುವಲ್ಲಿ ವಿಫಲರಾದರೇರೆ ಎಂಬ ಚಿಂತನೆಗೆ ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನ ಇಲ್ಲಿರುತ್ತದೆ.
ಆಗಸ್ಟ್ ತಿಂಗಳಲ್ಲಿ ಈ ಚಿತ್ರ ತೆರೆಕಾಣಲಿದೆ ಎಂದು ಚಿತ್ರ ತಂಡ ತಿಳಿಸಿದೆ. ಚಿತ್ರದ ಕುರಿತು ಸಾರ್ವಜನಿಕರ ಅಭಿಪ್ರಾಯ ಇನ್ನಷ್ಟೇ ವ್ಯಕ್ತವಾಗಬೇಕಿದೆ.
|