ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ಅಮರನಾಥಯಾತ್ರೆ:ಸ್ಫೋಟ ಸಂಚು ವಿಫಲ
webdunia
ಪ್ರಖ್ಯಾತ ಅಮರನಾಥ ಯಾತ್ರೆಗೆ ಇನ್ನು ಎರಡು ದಿನಗಳು ಬಾಕಿ ಇರುವಂತೆಯೇ , ಸೇನಾ ಕಾರ್ಯಾಚರಣೆಯಲ್ಲಿ ಭಾರೀ ಸ್ಫೋಟ ಸಂಚೊಂದುವಿಫಲವಾಗಿದೆ.

ಅಮರನಾಥ ಯಾತ್ರಿಕರ ಸುರಕ್ಷಿತತೆಗೆ ಸೇನೆ ಕಟ್ಟೆಚ್ಚರದ ಕಾವಲು ನಡೆಸುತ್ತಿದೆ. ಅಮರ ನಾಥ ಯಾತ್ರೆಯು ಜೂನ್ 30ರಿಂದ ಆರಂಭವಾಗಲಿದೆ. ಸುಪ್ರಸಿದ್ಧ ಯಾತ್ರೆಯಲ್ಲಿ ಈ ಬಾರಿ ಹೆಚ್ಚುನಂದಿ ಯಾತ್ರಿಕರು ಪಾಲ್ಗೊಳ್ಳುವರು.

ಹೊಲದಲ್ಲಿ ಹೂತಿಟ್ಟ ಸ್ಥಿತಿಯಲ್ಲಿ ಸ್ಫೋಟಕಗಳು ಪತ್ತೆಯಾಗಿವೆ. ಹ್ಯಾಂಡ್ ಗ್ರಾನೇಡ್‌ಗಳು ಪಿಸ್ತೂಲು ವಶವಾಗಿವೆ.

ಅಮರನಾಥ ಯಾತ್ರಿಕರನ್ನು ಗುರಿಯಾಗಿರಿಸಿ ಸ್ಫೋಟ ನಡೆಸುವ ಸಂಚು ಇದಾಗಿದ್ದು, 6 ಕೆಜಿ ಆರ್‌ಡಿಎಕ್ಸ್ ಹಾಗೂ ಇತರ ಸ್ಫೋಟಕ ಗಳನ್ನು ವಶಪಡಿಸಲಾಗಿದೆ.

ಸೇನಾ ಶಿಬಿರಕ್ಕೆ ಲಭಿಸಿದ ಖಚಿತ ಮಾಹಿತಿಯಂತೆ ಮಕ್ವಾಲ್ ಪ್ರದೇಶದಲ್ಲಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಪ್ರಸ್ತುತ ಸ್ಫೋಟಕಗಳು ಪತ್ತೆಯಾಗಿದ್ದುವು.ಇದೇ ವೇಳೆ 4 ಹ್ಯಾಂಡ್ ಗ್ರೇನೇಡ್‌ಗಳು , 1ಚೀನಿ ನಿರ್ಮಿತ ಪಿಸ್ತೂಲ್ ವಶವಾಗಿದೆ.
ಜಮ್ಮು ಮೂಲ ಶಿಬಿರವನ್ನು ಗುರಿಯಾಗಿಸಿ ಸ್ಫೋಟಕ ಜಮಾವಣೆ ನಡೆಸಲಾಗಿತ್ತು, ಯಾತ್ರಿಗರನ್ನು ಅಪಾಯಕ್ಕೀಡು ಮಾಡುವ ಗುರಿ ಹೊಂದಲಾಗಿತ್ತು ಎಂಬುದಾಗಿ ಸೇನಾ ಮೂಲಗಳು ತಿಳಿಸಿವೆ.
ಮತ್ತಷ್ಟು
ಗಾಂಧಿ ಮೈ ಫಾದರ್- ಕುತೂಹಲ
ಡೇರಾ ಕ್ಷಮೆ- ಅಕಾಲ್‌ ತಖ್ತ್ ಸಭೆ
ದೆಹಲಿಯಲ್ಲಿ ವೈದ್ಯರಿಂದ ಬಂದ್
ಶಿವಸೇನೆ ಸಂಬಂಧ- ಬಿಜೆಪಿ ಚಿಂತನೆ
ರಾಜ್ಯಸಭೆಗೆ ನಟ್ವರ್ ಅನರ್ಹ-ಕಾಂ
'ಶೆಖಾವತ್'ಗಳ ಯುದ್ಧವಲ್ಲ-ಬೈರೋನ್