ಪಶ್ಚಿಮ ಬಂಗಾಳದಲ್ಲಿ ಆರ್ಥಿಕ ಬಂದ್ ಘೋಷಿಸಿರುವ ಮಾವೋವಾದಿ ಉಗ್ರಗಾಮಿಗಳು ಪುರುಲಿಯಾ ಬಳಿ ರೈಲ್ವೇ ಸ್ಟೇಷನ್‌ಗೆ ಬೆಂಕಿ ಹಚ್ಚಿ ಧ್ವಂಸಗೊಳಿಸಿದ್ದಾರೆ.
ಕಟ್ಟಡ ಹಾಗೂ ಸಾಮಗ್ರಿಗಳಿಗೆ ಬೆಂಕಿ ಹಚ್ಚುವ ಮೊದಲು ಸಶಸ್ತ್ರ ಮಾವೋವಾದಿಗಳು ರೈಲ್ವೇ ಸಿಬ್ಬಂದಿಗಳಿಗೆ ಗಂಭೀರ ಹಲ್ಲೆ ಮಾಡಿ, ಹೊರಕ್ಕೆಸೆದಿದ್ದಾರೆ.
ಆ ಬಳಿಕ ದಾಖಲೆ ಪತ್ರಗಳು, ಕಚೇರಿ ಸಾಮಗ್ರಿಗಳು ಸೇರಿದಂತೆ ರೈಲ್ವೇ ನಿಲ್ದಾಣವನ್ನು ಬೆಂಕಿ ಹಾಕಿ ಸುಟ್ಟಿರುವುದಾಗಿ ರೈಲ್ವೇಯ ವಿಶೇಷ ಉಪ ವಾಣಿಜ್ಯ ವ್ಯವಸ್ಥಾಪಕ ಕೆ ಎಸ್ ಮುಖರ್ಜಿ ತಿಳಿಸಿದ್ದಾರೆ.
ಸಶಸ್ತ್ರಉಗ್ರಗಾಮಿಗಳು ರೈಲ್ವೇ ರಕ್ಷಣಾ ಪಡೆಯ ಸಿಬ್ಬಂದಿ ಹಾಗೂ ಮೂರು ಮಂದಿ ರೈಲ್ವೇ ಸಿಬ್ಬಂದಿಗಳನ್ನು ಹಲ್ಲೆ ನಡೆಸಿ, ಅವರನ್ನು ಕಟ್ಟಡದಿಂದ ಹೊರಕ್ಕೆ ಎಸೆದಿದ್ದಾರೆ.
ಪ್ರಸ್ತುತ ಧ್ವಂಸಗೊಂಡಿರುವ ಬಿರಾಂಡಿ ರೈಲ್ವೇ ನಿಲ್ದಾಣದ ಮೂಲಕ ಸಾಗುವ ಎಲ್ಲಾ ರೈಲುಗಾಡಿಗಳನ್ನು ಸ್ಥಗಿತಗೊಳಿಸಲಾಗಿದೆ.
ಮಾವೋವಾದಿಗಳು ಪ್ರದೇಶದಲ್ಲಿ 2 ದಿನಗಳವಧಿಯ ಆರ್ಥಿಕಬಂದ್‌ಗೆ ಕರೆ ನೀಡಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಜಾಗತೀಕರಣ,ಕೈಗಾರಿಕೀಕರಣ, ವಿಶೇಷ ಆರ್ಥಿಕ ವಲಯ ನೀತಿಯನ್ನು ವಿರೋಧಿಸಿ ಈ ಕ್ರಮ ಜರುಗಿಸಲಾಗುತ್ತಿದೆ.
|