ಬಹುಕೋಟಿ ಛಾಪಾಕಾಗದ ಹಗರಣದ ಆರೋಪಿ ಕರೀಂ ಲಾಲ್ ತೆಲಗಿಯೊಂದಿಗಿನ ಸಂಪರ್ಕ ಆರೋಪವನ್ನೆದುರಿಸುತ್ತಿರುವ ಪೊಲೀಸ್ ಆಯುಕ್ತರಾಗಿದ್ದ ಆರ್ ಎಸ್ ಶರ್ಮಾ ಅವರನ್ನು ಪ್ರಕರಣದಿಂದ ಬಿಡುಗಡೆ ಮಾಡಲಾಗಿದೆ.
ಮುಂಬೈ ಪೊಲೀಸ್ ಆಯುಕ್ತರಾಗಿದ್ದ ಶರ್ಮಾ ಅವರಿಗೆ ಛಾಪಾಕಾಗದ ಪ್ರಕರಣದಲ್ಲಿ ನೇರ ಶಾಮಿಲಾತಿ ಕುರಿತು ಯಾವುದೇ ಮಾಹಿತಿ ಇಲ್ಲ, ಯಾವುದೇ ಸಂಶಯ ಉಳಿದಿಲ್ಲ ಎಂದು ನ್ಯಾಯಾಲಯದ ಆದೇಶ ತಿಳಿಸಿದೆ.
ಆಯುಕ್ತ ಶರ್ಮಾ ಅವರಿಗೆ ಛಾಪಾಕಾಗದ ಹಗರಣ ಹಾಗೂ ಆರೋಪಿ ತೆಲಗಿಯೊಂದಿಗೆ ನೇರವಾಗಿ ಥಳಕು ಹಾಕುವಂತಹ ಯಾವುದೇ ಗುಮಾನಿ ಉಳಿದಿಲ್ಲದಿರುವುದರಿಂದ ಮುಂಬೈ ಸಂಯೋಜಿತ ಅಪರಾಧ ನಿಂಯತ್ರಣ ಕಾಯ್ದೆ ಅನ್ವಯವಾಗದು ಎಂದಿದೆ.
ಪೊಲೀಸ್ ಆಯುಕ್ತರಾಗಿದ್ದ ಶರ್ಮಾ ಅವರು ಹಗರಣದಲ್ಲಿ ಶಾಮೀಲಾತಿ ಆರೋಪದಂತೆ ಹುದ್ದೆಯಿಂದ ಅಮಾನತು ಗೊಂಡಿದ್ದರು. ಒಂದು ವರ್ಷಕಾಲ ಜೈಲಲ್ಲಿ ಉಳಿಯುವಂತಾಗಿತ್ತು. ಬಳಿಕ ಜಾಮೀನು ಲಭಿಸಿತ್ತು.
|