ವಿವಾದಗ್ರಸ್ತ ದೇರಾ ಸಿಖ್‌ಗುರು ಬಾಬಾ ಗುರ್ಮಿಟ್ ರಾಮ್ ರಹೀಂ ಸಿಂಗ್ ಅವರ ಹೊಸ ಕ್ಷಮೆಯಾಚನೆಯನ್ನು ಸಿಖ್ ಗುರುದ್ವಾರ್ ಪ್ರಬಂದಕ್ ಕಮಿಟಿ(ಎಸ್‌ಜಿಪಿಸಿ) ತಿರಸ್ಕರಿಸಿದೆ.
ತನ್ಮಧ್ಯೆ, ಕ್ಷಮೆಯಾಚನೆಯ ಮೇಲಣ ನಿರ್ಣಯಕ್ಕಾಗಿ ಸಿಖ್ ಸಂಘಟನೆ ಅಕಾಲ್ ತಖ್ತ್ ಸಭೆ ಸೇರಿ ಚರ್ಚಿಸಲಿದೆ. ಇಲ್ಲಿನ ನಿರ್ಣಯ ಇನ್ನಷ್ಟೇ ಬಹಿರಂಗವಾಗಬೇಕಿದೆ.
ಸಿಖ್ ಗುರುದ್ವಾರಗಳ ನಿಯಂತ್ರಣ ಹೊಂದಿರುವ ಎಸ್‌ಜಿಪಿಸಿಯ ಅಧ್ಯಕ್ಷರಾಗಿರುವ ಅವ್ತಾರ್ ಸಿಂಗ್ ಮಕ್ಕಾರ್ ಅವರು , ಸಮಿತಿಯ ಇಂದಿನ ಸಭೆ ದೇರಾ ಗುರುವಿಗೆ ಕ್ಷಮೆ ನೀಡಲು ನಿರಾಕರಿಸಿದೆ ಎಂದಿದ್ದಾರೆ.
ಬಾಬಾ ಗುರ್ಮಿಟ್ ಸಿಂಗ್ ಅವರ ಹೊಸ ಕ್ಷಮಾ ಪತ್ರದಲ್ಲಿ ಯಾವ ಹೊಸತನವೂ ಇಲ್ಲ , ಪತ್ರಿಕಾ ಪ್ರಕಟಣೆಗಾಗಿ ಕ್ಷಮೆಕೋರಿದ್ದಾರಷ್ಟೇ.
ಆದರೆ ಸಿಖ್ ಗುರುವಿನ ವೇಷದಲ್ಲಿ ಪ್ರದರ್ಶನ ನೀಡಿ ಜಾಹೀರಾತು ಪ್ರಕಟಿಸಿದ್ದರ ಹಿಂದಿನ ಉದ್ದೇಶ ಬಹಿರಂಗ ಪಡಿಸಲಿ. ಪ್ರಸ್ತುತ ಪ್ರಕರಣ ಸಿಖ್‌ಜನರನ್ನು ನೋಯಿಸಿದೆ ಎಂದಿದ್ದಾರೆ.
ದೇರಾ ಗುರುವು ಸಿಖ್‌ಗುರು ಗುರುಗೋಬಿಂದ್ ಸಿಂಗ್ ಅವರ ರೂಪದಲ್ಲಿ ಉಡುಪು ತೊಟ್ಟು ತಾನು ಪತ್ರಿಕಾ ಜಾಹೀರಾತು ನೀಡಿದ್ದರು. ಇದು ಸಿಖ್ ಸಮುದಾಯವನ್ನು ರೊಚ್ಚಿಗೆಬ್ಬಿಸಿತ್ತು.
ತನ್ಮಧ್ಯೆ, ದೇರಾ ಗುರುವನ್ನು ಬಂಧಿಸಿ ಕಾನೂನು ಕ್ರಮಕ್ಕೊಳಪಡಿಸಲು ಬಟಿಂಡಾ ನ್ಯಾಯಾಲಯದ ಆದೇಶವನ್ನು, ಪೊಲೀಸರ ಮನವಿಯಂತೆ ಪಂಜಾಬ್ ಸರ್ಕಾರ ಪರಿಶೀಲಿಸುತ್ತಿದೆ.
|