ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ಜಯಾಗೆ ಕೇಸು- ಚು.ಆಯೋಗ
webdunia
ತಮಿಳುನಾಡು ಎಐಎಡಿಎಂಕೆ ಮುಖ್ಯಸ್ಥರಾದ ಜಯಲಲಿತಾ ವಿರುದ್ಧ ಮೊಕದ್ಧಮೆ ದಾಖಲಿಸಲು ಚುನಾವಣಾ ಆಯೋಗ ಚುನಾವಣಾಧಿಕಾರಿಗಳಿಗೆ ಆದೇಶಿದೆ

ರಾಜ್ಯ ವಿಧಾನ ಸಭೆಗಾಗಿ 200ರಲ್ಲಿ ಜರುಗಿದ ಚುನಾವಣೆಯ ವೇಳೆ ಚುನಾವಣಾ ಆಯೋಗಕ್ಕೆ ತಪ್ಪು ಹಾಗೂ ಅಪೂರ್ಣಮಾಹಿತಿಗಳನ್ನೊಳಗೊಂಡ ದಾಖಲೆಪತ್ರ ಒದಗಿಸಿದ ಆರೋಪದ ಮೇಲೆ ಈ ಕ್ರಮ ಜರುಗಿಸಲಾಗಿದೆ.

ತಮಿಳುನಾಡಿನ ಉಚ್ಛನ್ಯಾಯಾಲಯದ ಆದೇಶದಂತೆ ಚುನಾವಣಾ ಆಯೋಗ ಕ್ರಮ ಜರುಗಿಸಲು ಮುಂದಾಗಿದೆ.

ಈ ಹಿನ್ನೆಲೆಯಲ್ಲಿ ಅಂದು ಜಯಲಲಿತಾ ಸ್ಪರ್ಧಿಸಿದ್ದ 4 ವಿಧಾನ ಸಭಾ ಕ್ಷೇತ್ರಗಳಿಗಾಗಿ ಸಲ್ಲಿಸಿದ ನಾಮಪತ್ರಗಳಲ್ಲಿ ಎರಡರ ವಿರುದ್ಧ ಕ್ರಮಜರುಗಿಸಲಾಗುತ್ತಿದೆ.

ರಾಜ್ಯದ ಭುವನಗಿರಿ ಹಾಗೂ ಪುದುಕೋಟೈ ವಿಧಾನ ಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಅಧಿಕಾರಿಗಳು ಸ್ಥಳೀಯ ಮ್ಯಾಜಿಸ್ಟ್ರೇಟ್ ‌ಮುಂದೆ ಜಯಲಲಿತಾ ವಿರುದ್ಧ ಪ್ರಕರಣ ದಾಖಲಿಸಲು ರಾಜ್ಯ ಚುನಾವಣಾ ಆಯೋಗ ಸೂಚಿಸಿದೆ.

ಜಯಲಲಿತಾ ಅವರು ನಾಲ್ಕು ವಿಧಾನ ಸಭಾಕ್ಷೇತ್ರಗಳಿಂದ ಸ್ಪರ್ಧಿಸುತ್ತಿರುವ ವಿವರವನ್ನು ಚುನಾವಣಾ ಆಯೋಗಕ್ಕೆ ತಿಳಿಸಿರಲಿಲ್ಲ ಎಂಬುದು ಪ್ರಸ್ತತ ಕ್ರಮಜರುಗಿಸಲು ಕಾರಣವಾಗಿದೆ. ಅಭ್ಯರ್ಥಿಯು ಕೇವಲ ಎರಡು ಕ್ಷೇತ್ರಗಳಿಂದಷ್ಟೇ ಸ್ಪರ್ಧಿಸಲು ಸಂವಿಧಾನ ಅವಕಾಶ ಕಲ್ಪಿಸಿದೆ.
ಮತ್ತಷ್ಟು
ದೇರಾ ಕ್ಷಮೆ-ಎಸ್‌ಜಿಪಿಸಿ ನಿರಾಕರಣೆ
ತೆಲಗಿ ಪ್ರಕರಣ:ಶರ್ಮಾಗೆ ಕ್ಲೀನ್‌ಚಿಟ್
ಮಾವೊಗಳಿಂದ ರೈಲ್ವೇನಿಲ್ದಾಣ ದ್ವಂಸ
ಅಮರನಾಥಯಾತ್ರೆ:ಸ್ಫೋಟ ಸಂಚು ವಿಫಲ
ಗಾಂಧಿ ಮೈ ಫಾದರ್- ಕುತೂಹಲ
ಡೇರಾ ಕ್ಷಮೆ- ಅಕಾಲ್‌ ತಖ್ತ್ ಸಭೆ