ಬಹುಕೋಟಿ ಛಾಪಾ ಕಾಗದ ಹಗರಣ ಪ್ರಮುಖ ಆರೋಪಿ ಅಬ್ದುಲ್ ಕರೀಂ ತೆಲಗಿ ತನ್ನೆಲ್ಲಾ ತಪ್ಪುಗಳನ್ನೂ ನ್ಯಾಯಾಲಯದಲ್ಲಿ ಒಪ್ಪಿಕೊಳ್ಳಲು ಸಿದ್ಧತೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.
ಈ ಕುರಿತು ಸಿದ್ಧನಾಗುತ್ತಿರುವ ತೆಲಗಿ ತನ್ನೆಲ್ಲಾ ಕಾಗದ ಪತ್ರಗಳ ಸಹಿತ ಗುರುವಾರದಂದು ನ್ಯಾಯಾಲಯಕ್ಕೆ ಹಾಜರಾಗಲು ಸೂಚನೆ ನೀಡಲಾಗಿದೆ.
ತೆಲಗಿ ತಪ್ಪೊಪ್ಪಿಗೆಯೊಂದಿಗೆ, ಕ್ಷಮಾಯಾಚನೆಯೂ ಇದೆಯೇ ಎಂಬುದು ತಿಳಿದು ಬಂದಿಲ್ಲ. ಆದರೆ ಆತ ಎಲ್ಲಾ ಆರೋಪಗಳನ್ನು ವಾದಿಸುವುದರಿಂದ ಸಂಭವಿಸುವ ಕಾಲಹರಣವನ್ನು ನಿವಾರಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬುದು ವಕೀಲರ ಹೇಳಿಕೆ.
ಮಹಾರಾಷ್ಟ್ರ ಸಂಯೋಜಿತ ಅಪರಾಧ ನಿಯಂತ್ರಣ ಕಾಯ್ದೆಯಡಿ ನಿರ್ವಹಿಸಲಾಗಿರುವ ನ್ಯಾಯಾಲಯವು ಗುರುವಾರ ಹಾಜರಾಗಲು ತೆಲಗಿಗೆ ತಿಳಿಸಿದೆ. ಇದರೊಂದಿಗೆ ತೆಲಗಿ ತಪ್ಪೊಪ್ಪಿಗೆ ನಿರ್ಧಾರ ನಿಚ್ಚಳವಾದಂತಾಗಿದೆ.
ಬಹುಕೋಟಿ ಛಾಪಾಕಾಗದ ಹಗರಣದಲ್ಲಿ ತಾನು ಶಾಮೀಲಾಗಿರುವುದಾಗಿ ತೆಲಗಿ ಒಪ್ಪಿಕೊಳ್ಳಲು ನಿಖರ ಕಾರಣವೇನು ಎಂದು ತಿಳಿದು ಬಂದಿಲ್ಲ. ಆದರೆ ವಿಚಾರಣೆ ಹಾಗೂ ತೀರ್ಪು ನೀಡಿಕೆ ಶೀಘ್ರವಾಗಲಿದೆ ಎಂದು ನಿರೀಕ್ಷೆ ಇದೆ.
ತನ್ಮಧ್ಯೆ ಮಹತ್ವದ ತೀರ್ಪೊಂದರಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಮುಂಬೈ ಪೊಲೀಸ್ ಆಯುಕ್ತರಾಗಿದ್ದ ಆರ್ ಎಸ್ ಶರ್ಮಾ ಅವರನ್ನು ಬಿಡುಗಡೆ ಮಾಡಲಾಗಿದೆ.
|