ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ರಾಷ್ಟ್ರಪತಿ ವೇತನ ಪರಿಷ್ಕರಣೆ -ಇಂದುಸಭೆ
webdunia
ರಾಷ್ಟ್ರಪತಿಯವರ ಗೌರವಧನ (ವೇತನ)ಮೊತ್ತ ಏರಿಸುವ ಕುರಿತಂತೆ ಇಂದು ಜರುಗುವ ಕೇಂದ್ರ ಸಚಿವ ಸಂಪುಟ ಸಭೆ ನಿರ್ಧಾರ ಸ್ವೀಕರಿಸಲಿದೆ.

ಮಹಿಳಾ ಸಶಕ್ತೀಕರಣ ಉದ್ದೇಶದಿಂದ ಮಹಿಳೆಯನ್ನು ರಾಷ್ಟ್ರಪತಿಯಾಗಿಸುವ ಪ್ರಯತ್ನ ನಡೆಯುತ್ತಿರುವಂತೆಯೇ, ಇತ್ತ ರಾಷ್ಟ್ರಪತಿ ಹುದ್ದೆಯಲ್ಲಿರುವವರ ಆರ್ಥಿಕ ಸಬಲೀಕರಣ ಚಿಂತನೆಯೂ ನಡೆಯುತ್ತಿರುವುದು ಕೂತೂಹಲ ಕೆರಳಿಸಿದೆ.

ದೇಶದ ಪ್ರಥಮ ಪ್ರಜೆಯಾಗಿರುವ ರಾಷ್ಟ್ರಪತಿಯ ಸಂಬಳವನ್ನು ಇಮ್ಮಡಿ ಮೊತ್ತವಾಗಿಸುವ ಸಾಧ್ಯತೆ ಇದೆ. ಸದ್ಯ 50,000 ರೂ.ಗಳಿರುವಮಾಸಿಕ ವೇತನವನ್ನು 1 ಲಕ್ಷ ರೂ.ಗಳಿಗೇರಿಸುವ ನಿರೀಕ್ಷೆ ಇದೆ.

ಇದೇ ಸಭೆಯಲ್ಲಿ ಉಪರಾಷ್ಟ್ರಪತಿಯವರ ಗೌರವಧನ(ವೇತನ)ದ ಕುರಿತಾಗಿಯೂ ಚರ್ಚೆ ನಡೆಯಲಿದೆ. ಒಟ್ಟಿನಲ್ಲಿ ದೇಶದ ಗಮನವಂತೂ ರಾಷ್ಟ್ರಪತಿ ಭವನದ ಸುತ್ತ ಸುತ್ತುತ್ತಿದೆ.
ಮತ್ತಷ್ಟು
ಅಡ್ವಾಣಿಗೆ-ಮುನ್ಷಿ ತಿರುಗೇಟು
ಛಾಪಾ-ತೆಲಗಿ ತಪ್ಪೊಪ್ಪಿಗೆ ಸಾಧ್ಯತೆ
ಜಯಾಗೆ ಕೇಸು- ಚು.ಆಯೋಗ
ದೇರಾ ಕ್ಷಮೆ-ಎಸ್‌ಜಿಪಿಸಿ ನಿರಾಕರಣೆ
ತೆಲಗಿ ಪ್ರಕರಣ:ಶರ್ಮಾಗೆ ಕ್ಲೀನ್‌ಚಿಟ್
ಮಾವೊಗಳಿಂದ ರೈಲ್ವೇನಿಲ್ದಾಣ ದ್ವಂಸ