ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ಚೆನ್ನೈಗೆ ಅಮೇರಿಕಾ ದೈತ್ಯ ಯುದ್ದನೌಕೆ!
webdunia
ಭಾರತದ ಕರಾವಳಿ, ಬಂದರಿಗೆ ಇದೇ ಪ್ರಥಮ ಬಾರಿಗೆ ಆಗಮಿಸಲಿರುವ ಅಮೇರಿಕದ ಬೃಹತ್ ವಿಮಾನ ವಾಹಕ ಅಣ್ವಸ್ತ್ರ ಸಹಿತ ಯುದ್ಧನೌಕೆಯಿಂದ ಪರಿಸರ ಹಾನಿಯಾಗದಂತೆ ಎಲ್ಲಾ ಕ್ರಮ ಕೈಗೊಳ್ಳಲಾಗುವುದು ಎಂದು ಭಾರತ ಸರ್ಕಾರ ತಿಳಿಸಿದೆ.

ಅಮೆರಿಕದ ದೈತ್ಯ ಯುದ್ಧ ನೌಕೆ 'ಯುಎಸ್‌ಎಸ್ ನಿಮಿಟ್ಸ್' ಜುಲೈ ಮೊದಲ ವಾರದಲ್ಲಿ ಭಾರತ ತಲುಪಲಿದ್ದು, ಚೆನೈ ಸಮುದ್ರದಲ್ಲಿ ಲಂಗರು ಇಳಿಸಲಿದೆ.

ಪ್ರಸ್ತುತ ಯುದ್ಧನೌಕೆ ಭಾರತದ ಬಂದರಿನಲ್ಲಿ ತಳವೂರುವುದನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅಂಗಪಕ್ಷವಾದ ಎಡರಂಗವೂ ವಿರೋಧ ವ್ಯಕ್ತಪಡಿಸಿತ್ತು, ಪರಿಸರವಾದಿಗಳೂ ವ್ಯಗ್ರರಾಗಿದ್ದರು.

ಚೆನ್ನೈ ಬಂದರದಲ್ಲಿ ಜುಲೈ1ರಿಂದ 15ರ ವರೆಗೆ ತಂಗಲಿರುವ ಈ ಯುದ್ಧ ನೌಕೆಯ ಪ್ರವೇಶ ಭಾರತ ಹಾಗೂ ಅಮೇರಿಕ ಸೌಹಾರ್ದದಲ್ಲಿ ಐತಿಹಾಸಿಕ ಹೆಜ್ಜೆ ಗುರುತಾಗಿ ಪರಿಗಣಿಸಲಾಗಿದೆ.

ಭಾರತವನ್ನು ಇರಾನ್ ಹಾಗೂ ಚೀನಾಗಳ ವಿರುದ್ಧ ಗುರಾಣಿಯಾಗಿ ಬಳಸಿಕೊಳ್ಳಲು ಅಮೇರಿಕಾ ದುರುದ್ದೇಶ ಹೊಂದಿದೆ. ಆದ್ದರಿಂದ ಪ್ರಸ್ತುತ ಯುದ್ಧ ನೌಕೆಯನ್ನು ಭಾರತದ ಜಲಸೀಮೆಯೊಳಗೆ ಸ್ವಾಗತಿಸಬಾರದು ಎಂಬುದು ಎಡರಂಗ ಸಂಘಟನೆಗಳ ಹೇಳಿಕೆ.

ಯುದ್ಧ ನೌಕೆ ಚೆನ್ನೈಯಲ್ಲಿರುವ ದಿನಗಳಲ್ಲಿ ಎಡರಂಗ ಸಂಘಟನೆಗಳು ಭಾರೀ ಪ್ರತಿಭಟನೆ ನಡೆಸಲು ಸಿದ್ಧವಾಗಿವೆ.

ಭಾರತೀಯ ರಕ್ಷಣಾ ಇಲಾಖೆ ಹೇಳುವಂತೆ ಭಾರ ಸಮುದ್ರದಲ್ಲಿ ಇದಕ್ಕೂ ಮುನ್ನ ಅಣ್ವಸ್ತ್ರ -ವಿಮಾನವಾಹಕ ಯುದ್ಧ ನೌಕೆಗಳು ಲಂಗರು ಹಾಕಿದ್ದುವು. ಫ್ರಾನ್ಸ್ ಹಾಗೂ ಇಂಗ್ಲೆಂಡ್‌ನ ಅಣುಶ್ತ್ರವಾಹಕ ನೌಕೆಗಳು ಆಗಮಿಸಿದ್ದುವು. 1988ರಿಂದ 1991ರ ಅವಧಿಯಲ್ಲಿ ಭಾರತ ಸೇನೆ ಅಣುಶಸ್ತ್ರಸಹಿತ ಜಲಾಂತರ್ಗಾಮಿ 'ಚಕ್ರ'ವನ್ನು ಬಳಸಿತ್ತು ಎಂದು ರಕ್ಷಣಾ ಇಲಾಖೆ ಸಮಜಾಯಿಷಿ ನೀಡಿದೆ.

ಅಮೇರಿಕದ ಪ್ರಸ್ತುತ ನಮಿಟ್ಸ್ ಯುದ್ಧ ನೌಕೆಯಿಂದ ಅಣುಶಕ್ತಿ ವಿಕಿರಣದ ಅಪಾಯವಿದೆ, ಇದು ನೆಲ-ಜಲ ಜೀವಜಾಲಕ್ಕೆ ಅಪಾಯಕಾರಿ ಎಂಬುದು ಪರಿಸರ ವಿಜ್ಞಾನಿಗಳ ವಾದ.

ಭಾರತ ಸಮುದ್ರ ಪ್ರದೇಶದಲ್ಲಿ 2001ರಿಂದೀಚೆಗೆ ಅಣುಶಸ್ತ್ರಾಸ್ತ್ರ ಸಹಿತ 10 ಯುದ್ಧ ನೌಕೆಗಳು ಲಂಗರಿಳಿಸಿವೆ. ನಿಮಿಟ್ಸ್ 11ನೆಯದೆಂದು ತಿಳಿಸಲಾಗಿದೆ.
ಮತ್ತಷ್ಟು
ದೇರಾ ಗುರು ಬಂಧನಕ್ಕೆ ಕ್ಷಣಗಣನೆ
ರಾಷ್ಟ್ರಪತಿ ವೇತನ ಪರಿಷ್ಕರಣೆ -ಇಂದುಸಭೆ
ಅಡ್ವಾಣಿಗೆ-ಮುನ್ಷಿ ತಿರುಗೇಟು
ಛಾಪಾ-ತೆಲಗಿ ತಪ್ಪೊಪ್ಪಿಗೆ ಸಾಧ್ಯತೆ
ಜಯಾಗೆ ಕೇಸು- ಚು.ಆಯೋಗ
ದೇರಾ ಕ್ಷಮೆ-ಎಸ್‌ಜಿಪಿಸಿ ನಿರಾಕರಣೆ