ದೇಶದಲ್ಲಿ ಮೊಗಲ ಸಾಮ್ರಾಜ್ಯದ ಸ್ಮಾರಕಗಳಲ್ಲೊಂದಾದ ದೆಹಲಿಯ ಕೆಂಪುಕೋಟೆಗೆ ವಿಶ್ವ ಸಂಸ್ಥೆಯ ಅಂಗವಾದ ಶಿಕ್ಷಣವಿಜ್ಞಾನ ಹಾಗೂ ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೊ) ಜಾಗತಿಕ ಪರಂಪರೆಯ ಸ್ಥಾನಮಾನ ನೀಡಿದೆ.
ಯುನೆಸ್ಕೊದ ಆಯ್ಕೆ ಸಮಿತಿಯು ಜಾಗತಿಕವಾಗಿ 40 ಸಾಂಸ್ಕೃತಿಕ ಸ್ಮಾರಕಗಳನ್ನು ಪಟ್ಟಿಮಾಡಿ ಅದರಲ್ಲಿ ನಾಲ್ಕನ್ನು ಅತಿವಿಶಿಷ್ಟವಾದವುಗಳೆಂಜು ಹೆಸರಿಸಿದ್ದು, ಕೆಂಪುಕೋಟೆ(ರೆಡ್‌ಫೋರ್ಟ್) ಇದರಲ್ಲಿ ಸೇರಿದೆ.
ನ್ಯೂಜಿಲೆಂಡ್‌ಲ್ಲಿ ಸಭೆ ಸೇರಿ ಇನ್ನಷ್ಟು ಜಾಗತಿಕ ಪರಂಪರೆಯ ಸ್ಥಾನಮಾನದ ಸ್ಮಾರಕ ಗಳನ್ನು ಆರಿಸಲಾಗುತ್ತಿದೆ. ಜಪಾನಿನ ಇವಾಮಿ ಗಿಂಝಾನ್ ಸಿಲ್ವರ್ ಮೈನ್, ಟರ್ಕಮೆನಿಸ್ತಾನದ ನಿಸಾ ಕೋಟೆಕೊತ್ತಳಗಳು, ಆಸ್ಟ್ರೇಲಿಯದ ಸಿಡ್ನಿಯಲ್ಲಿರುವ ಒಪೆರಾ ಇತರ ಮೂರು ಇತರ ಆಯ್ಕೆಗಳಾಗಿವೆ.
ಕೆಂಪು ಕೋಟೆಯು 17ನೇ ಶತಮಾನದ್ದಾಗಿದ್ದು, ಮೊಗಲ್ ಚಕ್ರವರ್ತಿಗಳ ಸಾಮ್ರಾಜ್ಯಶಾಹಿಯ ಪ್ರತೀಕವಾಗಿರುವಂತೆಯೇ, ಅವರ ಸುಂದರ ವಾಸ್ತುಶೈಲಿಯ ಸ್ಮಾರಕವೂ ಆಗಿದೆ. ಪುರಾತನ ಕೋಟೆಯನ್ನು ಅಂದು ಚಕ್ರವರ್ತಿ ಷಹಾಜಹಾನ್ ಇಂದಿನ ರೂಪದಲ್ಲಿ ನವೀಕರಿಸಿವುದಾಗಿ ಇತಿಹಾಸವಿದೆ.
ಕೋಟೆಯು ಪರ್ಷಿಯಾ, ತುಮೂರ, ಹಿಂದೂ ಪರಂಪರೆಗಳ ಸಮ್ಮಿಲನ ಎಂಬುದಾಗಿ ಯುನೆಸ್ಕೊದ ಹೇಳಿಕೆ ತಿಳಿಸಿದೆ. ಇದರೊಳಗಿನ ಅರಮನೆಯು ಖುರಾನ್‌ನಲ್ಲಿ ಸ್ವರ್ಗದ ವರ್ಣನೆಗಳನ್ನು ಅನುಕರಿಸಿ ರಚಿಸಲಾಗಿದೆ. ಸ್ವರ್ಗ ಸಮಾನ ಉದ್ಯಾನಗಳು, ಪುಷ್ಕರಣಿ ಎಲ್ಲವೂ ಇಲ್ಲಿವೆ.
|