ಮುಂಬೈನಲ್ಲಿ ಕಳೆದ ಶುಕ್ರವಾರದಿಂದ ಬೀಳುತ್ತಿರುವ ಧಾರಾಕಾರ ಮಳೆಯಿಂದಾಗಿ ರೈಲು ವಿಮಾನ, ಬಸ್ ಸಂಚಾರಗಳಲ್ಲಿ ವ್ಯತ್ಯಯವಾಗಿದ್ದು ಜನಸಂಚಾರ ಅಸ್ತವ್ಯಸ್ತ ವಾಗಿದೆ.
ಬಾಂದ್ರಾ, ಮಾತುಂಗಾ,ಲೋವರ್ ಪರೇಲ್ ಹಾಗೂ ಸೆಂಟ್ರಲ್ ಮುಂಬೈಗಳಲ್ಲಿ 108 ಎಂ.ಎಂ ಮಳೆಯಾಗಿದೆ. ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ.
ಸೆಂಟ್ರಲ್ ಮತ್ತು ಹಾರ್ಬರ್ ಪ್ರದೇಶಗಳಲ್ಲಿ ಸಂಚರಿಸುವ ರೈಲುಗಳ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರಿಗೆ ಭಾರಿ ತೊಂದರೆ ಎದುರಾಗಿದೆ ಎಂದು ಮೂಲಗಳು ತಿಳಿಸಿವೆ.
ಮಂಬೈ ನಗರಪಾಲಿಕೆ ಕಾರ್ಮಿಕರ ತಂಡಗಳು ಸುಗಮ ಸಂಚಾರಕ್ಕಾಗಿ ತಗ್ಗು ಪ್ರದೇಶಗಳಲ್ಲಿರುವ ನೀರನ್ನು ಹೊರತೆಗೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದೆ.
ಮುಂಗಾರು ಮಳೆ ಆರಂಭವಾದ ನಂತರ ಎರಡನೇ ಬಾರಿಗೆ ಮುಂಬೈ ಜನಜೀವನ ಅಸ್ತವ್ಯಸ್ತವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
|