ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ಭಾರತ- ಕುವೈತ್ ಮಾತುಕತೆ ಪ್ರಗತಿಯಲ್ಲಿ
webdunia
ವೈಮಾನಿಕ ಕ್ಷೇತ್ರದ ಹಕ್ಕುಗಳಿಗೆ ಸಂಬಂಧಿಸಿದಂತೆ ಉಂಟಾಗಿರುವ ಬಿಕ್ಕಟ್ಟು ಪರಿಹರಿಸುವ ನಿಟ್ಟಿನಲ್ಲಿ ಭಾರತ ಮತ್ತು ಕುವೈತ್ ನಡುವೆ ಮೂರನೆ ದಿನವೂ ಮಾತುಕತೆ ಸಾಗಿದ್ದು, ಇನ್ನು ಯಾವುದೇ ಪ್ರಗತಿ ಸಾಧಿಸಿಲ್ಲ ಎಂದು ಭಾರತೀಯ ರಾಯಭಾರಿ ಎಂ ಗಣಪತಿ ಹೇಳಿದ್ದಾರೆ.

ವಿವಾದ ಪರಿಹರಿಸುವ ನಿಟ್ಟಿನಲ್ಲಿ ಮಾತುಕತೆಗಳು ಒಂದೇಡೆ ಸಾಗಿದ್ದರೆ, ಗಲ್ಫ್ ರಾಷ್ಟ್ರಗಳು ಭಾರತೀಯ ಮೂಲದ ವಿಮಾನಗಳು ತಮ್ಮ ವಾಯು ಪ್ರದೇಶ ಉಪಯೋಗಿಸದಂತೆ ನಿರ್ಭಂಧಿಸಲು ಮುಂದಾಗಿವೆ.

ಎರಡು ದಿನಗಳ ಮಾತುಕತೆಗಳು ಪರಿಹಾರ ಕಂಡುಕೊಳ್ಳುವುದಕ್ಕೆ ವಿಫಲವಾಗಿರುವುದರಿಂದ ಮೂರನೆ ದಿನವೂ ಮಾತುಕತೆಗಳು ಸಾಗುವ ಸಾಧ್ಯತೆ ಇದೆ ಎಂದು ಭಾರತೀಯ ರಾಯಭಾರಿ ಹೇಳಿದ್ದು, ವಿವಾದಕ್ಕೆ ಅಡ್ಡಿಯಾಗಿರುವ ಅಂಶವನ್ನು ಮಾತ್ರ ಮಾದ್ಯಮ ಪ್ರತಿನಿಧಿಗಳ ಎದುರು ಹೇಳಲು ನಿರಾಕರಿಸಿದರು.

ಕಳೆದ ವರ್ಷ ಕುವೈತ್ ಮತ್ತು ಭಾರತ ನಡುವೆ ವಿಮಾನಯಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ದ್ವಿಪಕ್ಷೀಯ ಒಪ್ಪಂದವನ್ನು ಮಾಡಿಕೊಳ್ಳಲಾಗಿತ್ತು. ಒಪ್ಪಂದದ ಪ್ರಕಾರ 5200 ಪ್ರಯಾಣಿಕರನ್ನು ಉಭಯ ದೇಶಗಳು ತಮ್ಮ ವಿಮಾನಗಳಲ್ಲಿ ಸಾಗಿಸಬಹುದಾಗಿದೆ.

ಕುವೈತ್ ಏರವೇಸ್ ಮತ್ತು ಆಲ್ ಜಜೀರಾ ವೈಮಾನಿಕ ಸಾರಿಗೆ ಸಂಸ್ಥೆಗಳು ಪ್ರತಿದಿನ ಭಾರತಕ್ಕೆ ವಿಮಾನ ಸೇವೆಯನ್ನು ಒದಗಿಸುತ್ತಿವೆ. ಏರ್ ಇಂಡಿಯಾ ಮತ್ತು ಇಂಡಿಯನ್ ಏರಲೈನ್ಸ್ ವಾರಕ್ಕೆ ಏಳು ಬಾರಿ ಕುವೈತ್‌ಗೆ ವಿಮಾನ ಸೇವೆ ಒದಗಿಸುತ್ತಿವೆ.

ಆಲ್ ಜಜೀರಾ ವಿಮಾನಯಾನ ಸಂಸ್ಥೆಯ ಕಡಿಮೆ ಪ್ರಯಾಣದರದ ಕುರಿತು ಭಾರತ ತನ್ನ ಕಳವಳವನ್ನು ವ್ಯಕ್ತಪಡಿಸಿದ್ದು,ಇದರಿಂದಾಗಿ ಭಾರತೀಯ ವಿಮಾನಯಾನ ಸಂಸ್ಥೆಗಳ ಪ್ರಯಾಣಿಕರಲ್ಲಿ ಇಳಿಮುಖವಾಗುತ್ತಿದೆ ಎಂದು ಆರೋಪಿಸಿದೆ.

ದ್ವಿಪಕ್ಷೀಯ ಒಪ್ಪಂದದ ಪ್ರಕಾರ ಅಲ್ ಜಜೀರಾ ದುಬೈನಿಂದ ಭಾರತಕ್ಕೆ ವಿಮಾನಯಾನ ಸೇವೆಯನ್ನು ನೀಡಬಹುದು. ಆದರೆ ಅದು ತೃತೀಯ ರಾಷ್ಟ್ರಕ್ಕೆ ಸೇರಿದ ಕಂಪನಿಯಾಗಿರುವುದರಿಂದ ಒಪ್ಪಂದದ ಮೂಲ ಭಾವನೆಗೆ ದಕ್ಕೆ ತರುತ್ತದೆ ಎಂದು ಭಾರತೀಯ ವಿಮಾನಯಾನ ಸಚಿವಾಲಯ ಹೇಳಿದೆ.
ಮತ್ತಷ್ಟು
ಭಾರಿ ಮಳೆ:ಅಸ್ತವ್ಯಸ್ಥ
ಅಮರನಾಥ ಯಾತ್ರೆ ಆರಂಭ
ಯುನೆಸ್ಕೊ ವಿಶ್ವಪರಂಪರೆಗೆ ಕೆಂಪುಕೋಟೆ
ಚೆನ್ನೈಗೆ ಅಮೇರಿಕಾ ದೈತ್ಯ ಯುದ್ದನೌಕೆ!
ದೇರಾ ಗುರು ಬಂಧನಕ್ಕೆ ಕ್ಷಣಗಣನೆ
ರಾಷ್ಟ್ರಪತಿ ವೇತನ ಪರಿಷ್ಕರಣೆ -ಇಂದುಸಭೆ