ಉತ್ತರಪ್ರದೇಶದ ಸಿವಾನ ಜಿಲ್ಲೆಯ ಆರ್‌ಜೆಡಿ ಸಂಸದ ಶಾಹಬುದ್ದಿನ್ ಅವರಿಗೆ ವಿಶೇಷ ನ್ಯಾಯಾಲಯ ಕಳ್ಳತನ ಮಾಡಿದ ದ್ವಿಚಕ್ರ ವಾಹನವನ್ನು ಇರಿಸಿಕೊಂಡಿದ್ದಾಗಿ 3 ವರ್ಷಗಳ ಶಿಕ್ಷೆ ವಿಧಿಸಿ ಆದೇಶಿಸಿದೆ.
ಪ್ರಾತಪ್ಪುರ್ ಗ್ರಾಮದ ಶುಭ ನಾರಾಯಣ ಪ್ರಸಾದ್ ಅವರ ದ್ವಿಚಕ್ರವಾಹನವನ್ನು ಕಳ್ಳತನ ಮಾಡಿ ಮನೆಯಲ್ಲಿರಿಸಿಕೊಂಡಿದ್ದು ಪೊಲೀಸರು ದಾಳಿ ನಡೆಸಿದಾಗ ಸಂಸದರ ಮನೆಯಲ್ಲಿ ಪತ್ತೆಯಾಗಿತ್ತು. ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ 2005 ಏಪ್ರಿಲ್ 24ರಂದು ಪೊಲೀಸರು ಜಪ್ತಿ ಮಾಡಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.
ಆರೋಪಿಯು ಕಳ್ಳಕನದಿಂದ ವಾಹನವನ್ನು ತಮ್ಮ ಮನೆಯಲ್ಲಿ ಇರಿಸಿಕೊಂಡಿದ್ದರಿಂದ ಸಂವಿಧಾನದನ್ವಯ ಮೂರು ವರ್ಷಗಳ ಕಾಲ ಶಿಕ್ಷೆ ವಿಧಿಸಲಾಗಿದೆ ಎಂದು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿ.ವಿ ಗುಪ್ತಾ ಅವರು ಹೇಳಿದ್ದಾರೆ.
|