ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ಬಾಂಬ್ ಪತ್ತೆ:ಸಂಚು ವಿಫಲ
webdunia
ಲಕ್ಷಾಂತರ ಭಕ್ತಾಧಿಗಳ ಪವಿತ್ರಯಾತ್ರಾ ಸ್ಥಳವಾದ ಅಮರನಾಥ್‌ಗೆ ಸಾಗುವ ಮಾರ್ಗದಲ್ಲಿ ವಿಚ್ಚಿದ್ರಕಾರಿ ಶಕ್ತಿಗಳು ಇಟ್ಟಿದ್ದ ಅನಾಹುತಕಾರಿ ಬಾಂಬ್‌ ಪತ್ತೆ ಹಚ್ಚಿ ಸಂಚನ್ನು ವಿಫಲಗೊಳಿಸಿದ್ದಾರೆ.

ಶ್ರೀನಗರ ಮತ್ತು ಜಮ್ಮು ಹೆದ್ದಾರಿಯಲ್ಲಿ ಅಡಗಿಸಿಟ್ಟ ಶಕ್ತಿಶಾಲಿಯಾದ ಬಾಂಬ್‌ನ್ನು ಪೊಲೀಸರು ಪತ್ತೆ ಹಚ್ಚಿ ಮುಂದಾಗಬಹುದಾಗಿದ್ದ ಅನಾಹುತವನ್ನು ತಪ್ಪಿಸಿದ್ದಾರೆ.

ದಕ್ಷಿಣ ಕಾಶ್ಮಿರದ ಖನ್ನಾಬಾಲ್ ಪ್ರದೇಶದಲ್ಲಿರುವ ಪದವಿ ಕಾಲೇಜಿನ ಹೊರಭಾಗದಲ್ಲಿ ಅಡಗಿಸಿಡಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಶನಿವಾರದಿಂದ ಆರಂಭವಾಗಬೇಕಿದ್ದ ಅಮರನಾಥ್ ಯಾತ್ರೆ ಭಾರಿ ಮಳೆಯ ಕಾರಣದಿಂದಾಗಿ ರದ್ದುಗೊಳಿಸಲಾಗಿತ್ತು.

ಅಮರನಾಥ್‌ಗೆ ಉತ್ತರ ಕಾಶ್ಮಿರದ ಬಲತಾಲ್ ಹಾಗೂ ದಕ್ಷಿಣ ಕಾಶ್ಮಿರದ ಪಹಲ್‌ಗಾಮ್‌ನಿಂದ ತೆರಳುವ ಎರಡು ಮಾರ್ಗಗಳು ಮಳೆಯ ಕಾರಣದಿಂದಾಗಿ ರದ್ದುಗೊಳಿಸಲಾಗಿದೆ.
ಮತ್ತಷ್ಟು
ಕಳ್ಳತನ:ಸಂಸದನಿಗೆ ಜೈಲು
ಭಾರತ- ಕುವೈತ್ ಮಾತುಕತೆ ಪ್ರಗತಿಯಲ್ಲಿ
ಭಾರಿ ಮಳೆ:ಅಸ್ತವ್ಯಸ್ಥ
ಅಮರನಾಥ ಯಾತ್ರೆ ಆರಂಭ
ಯುನೆಸ್ಕೊ ವಿಶ್ವಪರಂಪರೆಗೆ ಕೆಂಪುಕೋಟೆ
ಚೆನ್ನೈಗೆ ಅಮೇರಿಕಾ ದೈತ್ಯ ಯುದ್ದನೌಕೆ!