ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ರಸ್ತೆ ಅಪಘಾತ: ದೆಹಲಿ ಮಾಜಿ ಸಿಎಂ ನಿಧನ
webdunia
ದೆಹಲಿ ಮಾಜಿ ಲೋಕಸಭಾ ಸದಸ್ಯ , ಮಾಜಿ ಮುಖ್ಯಮಂತ್ರಿ ಸಾಹೀಬ್ ಸಿಂಗ್ ವರ್ಮಾ ಭೀಕರ ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
.
ರಾಜಸ್ಥಾನದ ಮಾಧೋಪುರ್ ಜಿಲ್ಲೆಯ ಸಹಾಜಾನ್‌ಪುರ್ ಬಳಿ ನಡೆದ ರಸ್ತೆ ಅಪಘಾತದಲ್ಲಿ ಮಾಜಿ ಮುಖ್ಯಮಂತ್ರಿ ಸಾಹೀಬ್ ಸಿಂಗ್ ವರ್ಮಾ(64) ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ.

ದೆಹಲಿಯ ಮುಂಡಕಾ ಗ್ರಾಮದಲ್ಲಿ 1943ರ ಮಾರ್ಚ್ 15ರಂದು ಜನಿಸಿದ್ದು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ ನಂತರ ರಾಜಕೀಯವನ್ನು ಪ್ರವೇಶಿಸಿದ್ದರು.

ಜನತಾಪಕ್ಷದಿಂದ ಮುನಸಿಪಲ್ ಕಾರ್ಪೋರೇಶನ್‌ಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ನಂತರ 1983ರರಲ್ಲಿ ಬಿಜೆಪಿಯಿಂದ ಗೆಲುವು ಸಾಧಿಸಿದ್ದರು.

ದೆಹಲಿ ಸರಕಾರದಲ್ಲಿ 1993ರಲ್ಲಿ ಶಿಕ್ಷಣ ಮತ್ತು ಅಭಿವೃದ್ಧಿ ಖಾತೆ ಸಚಿವರಾಗಿ ಸೇವೆ ಸಲ್ಲಿಸಿ 1996ರಲ್ಲಿ ದೆಹಲಿ ಮುಖ್ಯಮಂತ್ರಿಯಾಗಿ ಎರಡುವರೆ ವರ್ಷಗಳ ಕಾಲ ಅಧಿಕಾರದಲ್ಲಿದ್ದರು.ನಂತರ ವಾಜಪೇಯಿ ಸರಕಾರದಲ್ಲಿ ಕಾರ್ಮಿಕ ಖಾತೆಯನ್ನು ನಿಭಾಯಿಸಿದ್ದರು.
ಮತ್ತಷ್ಟು
ಬಾಂಬ್ ಪತ್ತೆ:ಸಂಚು ವಿಫಲ
ಕಳ್ಳತನ:ಸಂಸದನಿಗೆ ಜೈಲು
ಭಾರತ- ಕುವೈತ್ ಮಾತುಕತೆ ಪ್ರಗತಿಯಲ್ಲಿ
ಭಾರಿ ಮಳೆ:ಅಸ್ತವ್ಯಸ್ಥ
ಅಮರನಾಥ ಯಾತ್ರೆ ಆರಂಭ
ಯುನೆಸ್ಕೊ ವಿಶ್ವಪರಂಪರೆಗೆ ಕೆಂಪುಕೋಟೆ