ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ನಕ್ಸಲ್‌ರಿಂದ 8 ಮಂದಿ ಹತ್ಯೆ
webdunia
ಉತ್ತರಪ್ರದೇಶದ ರೋಹಟಾಸ್ ಜಿಲ್ಲೆಯ ಸಾಸರಾಮ್ ಬಳಿ ನಕ್ಸಲೀಯರ ತಂಡ ಪಟ್ಟಣದ ಹೊರವಲಯದಲ್ಲಿರುವ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿ ಐವರು ಪೊಲೀಸರು ಸೇರಿದಂತೆ 8 ಮಂದಿಯನ್ನು ಹತ್ಯೆ ಮಾಡಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನಕ್ಸಲೀಯರ ತಂಡದಲ್ಲಿ ಸುಮಾರು 250ಕ್ಕೂ ಹೆಚ್ಚು ಜನರಿದ್ದು ರಾಜ್‌ಪುರ್ ಹಾಗೂ ಬಗೈಲಾ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿ ಐವರು ಪೊಲೀಸರು ಒಬ್ಬ ಚೌಕಿದಾರ ಹಾಗೂ ಇರ್ವರು ನಾಗರಿಕರನ್ನು ಹತ್ಯೆ ಮಾಡಿದ್ದಲ್ಲದೇ ಭಾರಿ ಶ್ರಸ್ತ್ರಾಸ್ತ್ರಗಳನ್ನು ಲೂಟಿ ಮಾಡಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ನಕ್ಸಲೀಯರು ಡೈನೆಮೆಟ್‌ನಿಂದ ಪೊಲೀಸ್ ಠಾಣೆಯನ್ನು ಸ್ಪೋಟಿಸಿದ್ದಲ್ಲದೇ ನಡೆಸಿದ ದಾಳಿಯಲ್ಲಿ ನಾಲ್ವರು ಪೊಲೀಸರು ಸೇರಿದಂತೆ 8 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಕ್ಸಲೀಯರ ಪತ್ತೇಗಾಗಿ ಪೊಲೀಸರು ವ್ಯಾಪಕ ಜಾಲ ಬೀಸಿದ್ದು ಎಲ್ಲ ಕಡೆ ಹುಡುಕಾಟ ನಡೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಎಚ್.ಖಾನ್ ತಿಳಿಸಿದ್ದಾರೆ.
ಮತ್ತಷ್ಟು
ಜಮ್ಮು ಕಾಶ್ಮಿರದಲ್ಲಿ ಶಾಂತಿ
ರಸ್ತೆ ಅಪಘಾತ: ದೆಹಲಿ ಮಾಜಿ ಸಿಎಂ ನಿಧನ
ಬಾಂಬ್ ಪತ್ತೆ:ಸಂಚು ವಿಫಲ
ಕಳ್ಳತನ:ಸಂಸದನಿಗೆ ಜೈಲು
ಭಾರತ- ಕುವೈತ್ ಮಾತುಕತೆ ಪ್ರಗತಿಯಲ್ಲಿ
ಭಾರಿ ಮಳೆ:ಅಸ್ತವ್ಯಸ್ಥ