ಮುಂಬರುವ ದಿನಗಳಲ್ಲಿ ತೃತೀಯ ರಂಗ ಹಾಗೂ ಎಡಪಕ್ಷಗಳು ಒಗ್ಗಟ್ಟಾಗುವುದು ಖಚಿತ ಎಂದು ಎಐಎಡಿಎಂಕೆ ಮುಖ್ಯಸ್ಥೆ ಜಯಲಲಿತಾ ಅವರು ಭವಿಷ್ಯ ನುಡಿದಿದ್ದಾರೆ.
ಈ ಸಂದರ್ಭದಲ್ಲಿ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮೇಲೆ ವಾಗ್ದಾಳಿ ನಡೆಸಿದ ಅವರು ಕಾಂಗ್ರೆಸ್ ಅಸ್ಪ್ರಶ್ಯ ಎಂದು ಕಟುವಾಗಿ ಟೀಕಿಸಿದರು.
ಖಾಸಗಿ ಚಾನೆಲ್ ಒಂದರ ಸಂದರ್ಶನದಲ್ಲಿ ಮಾತನಾಡಿದ ಅವರು,ಕಾಂಗ್ರೆಸ್ ನಾಯಕಿಯ ವಿದೇಶಿ ಮೂಲವನ್ನು ಪ್ರಸ್ತಾಪಿಸಿ,ಕುರ್ಚಿಯ ಹಿಂದಿರುವ ಅಧಿಕಾರ ಸೋನಿಯಾ ಅವರದ್ದು ಎಂದು ಹೇಳಿದರು.
ಅವರು ಇಡೀ ದೇಶದ ಆಡಳಿತವನ್ನು ನಿಯಂತ್ರಿಸುತ್ತಿದ್ದು,ದೇಶ ಅನಾರೋಗ್ಯಕರ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂದು ತಿಳಿಸಿದರು.
ನಾವು ಸ್ವಾತಂತ್ರ್ಯ ಪಡೆದು ಕೇವಲ 60 ವರ್ಷಗಳಾದವು.ಒಬ್ಬ ವಿದೇಶಿ ಮಹಿಳೆಯ ಪಾದಕ್ಕೆ ಭಾರತವನ್ನು ಅರ್ಪಿಸಲು ನಮ್ಮ ಪೂರ್ವಿಕರು ತಮ್ಮ ಜೀವವನ್ನೇ ಬಲಿ ಕೊಟ್ಟು ಸ್ವಾತಂತ್ರ್ಯ ದೊರಕಿಸಿಕೊಟ್ಟರೇ ಎಂದು ಪ್ರಶ್ನಿಸಿದರು.ವಿದೇಶಿ ಮಹಿಳೆಯ ಬಳಿ ಗುಲಾಮಗಿರಿ ಮಾಡುವ ಪಕ್ಷ ನಮಗೆ ಅಸ್ಪ್ರಶ್ಯ ಎಂದರು.
ಒಬ್ಬ ಭಾರತೀಯ ಪ್ರಧಾನಿಯಾದರೆ ಅಥವಾ ರಾಷ್ಟ್ರಪತಿಯಾದರೆ ಅವರಿಗೆ ಮಾತ್ರ ನಾನು ಬೆಂಬಲ ನೀಡುವೆ ಎಂದು ಹೇಳಿದರು.
|