ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ಎನ್‌ಡಿಎ ಆರೋಪದಲ್ಲಿ ಸತ್ಯಾಂಶವಿಲ್ಲ
webdunia
ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ಆರೋಪ ಮತ್ತು ಪ್ರತ್ಯಾರೋಪಗಳು ನಡೆಯುತ್ತಿರುವಂತೆಯೇ ನನ್ನ ವಿರುದ್ದ ಎನ್‌ಡಿಎ ಮಾಡಿದ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ರಾಷ್ಟ್ರಪತಿ ಹುದ್ದೆ ಅಭ್ಯರ್ಥಿ ಪ್ರತಿಭಾ ಪಾಟೀಲ್ ಹೇಳಿದ್ದಾರೆ.

ರಾಷ್ಟ್ರಪತಿ ಸ್ಥಾನಕ್ಕಾಗಿ ನಾಮಪತ್ರ ಸಲ್ಲಿಸಿದ ನಂತರ ಚನ್ನೈನಲ್ಲಿ ನಡೆದ ಭಾರಿ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು ಮಹಿಳೆ ದೇಶದ ಉನ್ನತ ಸ್ಥಾನಕ್ಕೆ ಏರುತ್ತಿರುವುದು ಎನ್‌ಡಿಎ ಪಕ್ಷಗಳಿಗೆ ಅಸಮಧಾನ ಉಂಟು ಮಾಡಿದೆ ಎಂದು ಹೇಳಿದರು

.ತಮ್ಮ ಎದುರಾಳಿ ಭೈರವ್‌ಸಿಂಗ್ ಶೆಖಾವತ್ ಅವರನ್ನು ಟೀಕಿಸದೇ ತಮ್ಮ ಅಭೂತಪೂರ್ವ ಬೆಂಬಲ ನಮಗಿರಲಿ ಎಂದು ನುಡಿದರು.

ತಮಿಳುನಾಡಿನ ಮುಖ್ಯಮಂತ್ರಿಕರುಣಾನಿಧಿ ಅವರು ಮಾತನಾಡಿ ಯುಪಿಎ ಮಿತ್ರಕೂಟ ಮಹಿಳಾ ಅಭ್ಯರ್ಥಿಯನ್ನು ಬೆಂಬಲಿಸುತ್ತಿದ್ದು ಮುಂದಿನ ರಾಷ್ಟ್ರಪತಿಯಾಗುವುದು ಖಚಿತವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಾವಿರಾರು ಮಹಿಳೆಯರು ಬೃಹತ್ ಮೆರವಣಿಗೆ ನಡೆಸಿ ಬೆಂಬಲ ಸೂಚಿಸಿದರು ಎಂದು ಡಿಎಂಕೆ ಮೂಲಗಳು ತಿಳಿಸಿವೆ.
ಮತ್ತಷ್ಟು
ತೃತೀಯ ರಂಗ-ಎಡಪಕ್ಷ ಒಗ್ಗಟ್ಟು:ಜಯಲಲಿತಾ
ವರ್ಷಧಾರೆ- ಸಹಜ ಸ್ಥಿತಿಯತ್ತ ಮುಂಬೈ
ನಕ್ಸಲ್‌ರಿಂದ 8 ಮಂದಿ ಹತ್ಯೆ
ಜಮ್ಮು ಕಾಶ್ಮಿರದಲ್ಲಿ ಶಾಂತಿ
ರಸ್ತೆ ಅಪಘಾತ: ದೆಹಲಿ ಮಾಜಿ ಸಿಎಂ ನಿಧನ
ಬಾಂಬ್ ಪತ್ತೆ:ಸಂಚು ವಿಫಲ