ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ಮಹಿಳಾ ಕ್ಯಾಪ್ಟನ್ ಆತ್ಮಹತ್ಯೆ
webdunia
ಹೆಚ್ಚಿದ ಒತ್ತಡವನ್ನು ತಾಳಲಾರದೆ ಸೈನಿಕ ಶಿಬಿರದಲ್ಲಿದ್ದ ಮಹಿಳಾ ಕ್ಯಾಪ್ಟನ್ ನೇಣು ಹಾಕಿಕೊಂಡ ಸಾವನ್ನಪ್ಪಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.

ಎಲೆಕ್ಟ್ರಿಕಲ್ ಹಾಗೂ ಮೆಕಾನಿಕಲ್ ವಿಭಾಗದ 113ನೇಯ ವಿಭಾಗದಲ್ಲಿದ್ದ ಕ್ಯಾಪ್ಟನ್ ಮೇಘಾ ರಜ್ದಾನ್ ಬೆಳಿಗ್ಗೆ 7 ಗಂಟೆ ಸುಮಾರಿಗೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.

ಕರ್ತವ್ಯಕ್ಕೆ ಹಾಜರಾಗದ ಹಿನ್ನಲೆಯಲ್ಲಿ ಸೇನಾ ಅಧಿಕಾರಿಗಳು ರಜ್ದಾನ ವಾಸವಾಗಿದ್ದ ಶಿಬಿರದ ಬಾಗಿಲನ್ನು ತಟ್ಟಿದರು ಯಾವುದೇ ಪ್ರತಿಕ್ರಿಯೇ ಬಾರದ ಹಿನ್ನೆಲೆಯಲ್ಲಿ ಬಾಗಿಲನ್ನು ಮುರಿದ ಸೇನಾ ಅಧಿಕಾರಿಗಳು, ಕ್ಯಾಪ್ಟನ್ ಮೇಘಾ ರಜ್ಗಾನ್ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಯಾವುದೇ ಫಲಕಾರಿಯಾಗಲಿಲ್ಲ ಎಂದು ಸೇನಾ ಮೂಲಗಳು ತಿಳಿಸಿವೆ.

ಕ್ಯಾಪ್ಟನ್ ಮೇಘಾ ರಜ್ಗಾನ್ ಅವರು ತಮ್ಮ ಸಹದ್ಯೋಗಿ ಅಧಿಕಾರಿಗಳೊಂದಿಗೆ ಮನಸ್ತಾಪವಿತ್ತು ಎನ್ನುವ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಗೆ ಆದೇಶಿಸಲಾಗಿದೆ.

ಟೈಗರ್ ವಿಭಾಗದ ಜನರಲ್ ಆಫೀಸರ್ ಕಮಾಂಡಿಂಗ್, ಮೇಜರ್ ಜನರಲ್ ಎಲ್ ಲೂಂಬಾ ಮತ್ತು ಹಿರಿಯ ಸೇನಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಮತ್ತಷ್ಟು
ಎನ್‌ಡಿಎ ಆರೋಪದಲ್ಲಿ ಸತ್ಯಾಂಶವಿಲ್ಲ
ತೃತೀಯ ರಂಗ-ಎಡಪಕ್ಷ ಒಗ್ಗಟ್ಟು:ಜಯಲಲಿತಾ
ವರ್ಷಧಾರೆ- ಸಹಜ ಸ್ಥಿತಿಯತ್ತ ಮುಂಬೈ
ನಕ್ಸಲ್‌ರಿಂದ 8 ಮಂದಿ ಹತ್ಯೆ
ಜಮ್ಮು ಕಾಶ್ಮಿರದಲ್ಲಿ ಶಾಂತಿ
ರಸ್ತೆ ಅಪಘಾತ: ದೆಹಲಿ ಮಾಜಿ ಸಿಎಂ ನಿಧನ