ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ವರುಣನ ಅರ್ಭಟಕ್ಕೆ 63 ಮಂದಿ ಬಲಿ
webdunia
ಗುಜರಾತ್‌ನಲ್ಲಿ ಮುಂಗಾರು ಮಳೆಯ ಅರ್ಭಟಕ್ಕೆ 63 ಮಂದಿ ನಿರಾಶ್ರಿತರಾಗಿದ್ದು ಸುಮಾರು 6000 ಕುಟುಂಬಗಳು ನಿರಾಶ್ರಿತರಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೌರಾಷ್ಟ್ರ ಮತ್ತು ರಾಜ್ಯದ ದಕ್ಷಿಣ ಭಾಗದಲ್ಲಿರುವ ಜುನಾಘರ್,ಜಾಮ್‌ನಗರ ಮತ್ತು ರಾಜ್‌ಕೋಟ್ ಪ್ರದೇಶಗಳಲ್ಲಿ ಹೆಚ್ಚಿನ ಮಳೆಹಾನಿಯಾಗಿದ್ದು ಭಾರಿ ಹಾನಿ ಸಂಭವಿಸಿವೆ.

ಬರೂಚ್, ನರ್ಮದಾ, ಹಾಗೂ ಸೂರತ್,ಮತ್ತು ಭಾವನಗರ ಜಿಲ್ಲೆಗಳು ಸೇರಿದಂತೆ ಅನೇಕ ಜಿಲ್ಲೆಗಳು ಜಲಾವೃತ್ತವಾಗಿವೆ ಎಂದು ಜಿಲ್ಲಾಡಳಿತಗಳು ವರದಿ ಮಾಡಿವೆ.

ಅಹಮದಾಬಾದ್ ನಗರದಿಂದ ಮುಂಬೈ ಮಾರ್ಗವಾದ ರಾಷ್ಟ್ರೀಯ ಹೆದ್ದಾರಿ 8ರ ಅನೇಕ ಕಡೆಗಳಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ ಎಂದು ಮೂಲಗಳು ತಿಳಿಸಿವೆ.

ಅತಿವೃಷ್ಠಿಯಾದ ಸ್ಥಳಗಳಲ್ಲಿ ಸೇನೆಯನ್ನು ಸನ್ನದ್ದು ಸ್ಥಿತಿಯಲ್ಲಿ ಇಡಲಾಗಿದೆ. ತುರ್ತುಪರಿಸ್ಥಿತಿ ನಿರ್ವಹಣೆಗೆ ಗಾಂಧಿನಗರದಲ್ಲಿ ಸೇವಾ ಕೇಂದ್ರ ಹಾಗೂ ದೂರವಾಣಿ ಸೌಲಭ್ಯಗಳನ್ನು ತೆರೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮತ್ತಷ್ಟು
ಮಹಿಳಾ ಕ್ಯಾಪ್ಟನ್ ಆತ್ಮಹತ್ಯೆ
ಎನ್‌ಡಿಎ ಆರೋಪದಲ್ಲಿ ಸತ್ಯಾಂಶವಿಲ್ಲ
ತೃತೀಯ ರಂಗ-ಎಡಪಕ್ಷ ಒಗ್ಗಟ್ಟು:ಜಯಲಲಿತಾ
ವರ್ಷಧಾರೆ- ಸಹಜ ಸ್ಥಿತಿಯತ್ತ ಮುಂಬೈ
ನಕ್ಸಲ್‌ರಿಂದ 8 ಮಂದಿ ಹತ್ಯೆ
ಜಮ್ಮು ಕಾಶ್ಮಿರದಲ್ಲಿ ಶಾಂತಿ