ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಿರುವ ಯುಪಿಎ ಮತ್ತು ಎಡಪಕ್ಷಗಳ ಅಭ್ಯರ್ಥಿ ಪ್ರತಿಭಾ ಪಾಟೀಲ್‌ರ ನೇಮಕವನ್ನು ರದ್ದುಗೊಳಿಸುವಂತೆ ಸಲ್ಲಿಸಲಾಗಿದ್ದ ಮನವಿಯನ್ನು ಸರ್ವೋಚ್ಛ ನ್ಯಾಯಾಲಯ ವಜಾ ಮಾಡಿದೆ.
ಮನವಿಯಲ್ಲಿ ಮಾಡಲಾದ ಆಪಾದನೆಗಳಿಗೆ ಪೂರಕವಾದ ಯಾವುದೆ ದಾಖಲಾತಿಗಳನ್ನು ಒದಗಿಸಲ್ಲವಾದ್ದರಿಂದ ಅರ್ಜಿಯನ್ನು ವಜಾ ಮಾಡಲಾಗಿದೆ ಎಂದು ನಾಯಮೂರ್ತಿ ತರುಣ್ ಚಟರ್ಜಿ ಮತ್ತು ಪಿ ಕೆ ಚಟರ್ಜಿ ಅವರನ್ನೊಳಗೊಂಡ ದ್ವಿ ಸದಸ್ಯ ಪೀಠ ಹೇಳಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಿರುವ ಯುಪಿಎ-ಎಡಪಕ್ಷಗಳ ಅಭ್ಯರ್ಥಿ ಪ್ರತಿಭಾ ಪಾಟೀಲ್ ಅವರ ವಿರುದ್ಧ ಹಲವಾರು ಆರೋಪಗಳು ಕೇಳಿ ಬರುತ್ತಿವೆ.
ಅಲ್ಲದೇ ಪ್ರತಿಭಾ ಪಾಟೀಲ್ ತಮ್ಮ ಆಸ್ತಿ ವಿವರವನ್ನು ಬಹಿರಂಗಗೊಳಿಸುವಂತೆ ಒತ್ತಾಯಿಸಿ ಬಿಜಿಪಿಯ ಹಿರಿಯ ನಾಯಕ ಎಲ್ ಕೆ ಆಡ್ವಾನಿ ಅವರು ಚುನಾವಣಾ ಆಯೋಗಕ್ಕೆ ಪತ್ರವನ್ನು ಬರೆದಿದ್ದಾರೆ.
ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‍ಡಿಎ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಮತ್ತು ಉಪರಾಷ್ಟ್ರಪತಿ ಭೈರೊನ್ ಸಿಂಗ್ ಶೆಖಾವತ್ ಮತ್ತು ಯುಪಿಎ ಅಭ್ಯರ್ಥಿ ಪ್ರತಿಭಾ ಪಾಟೀಲ್‌ರ ನಡುವೆ ನೇರ ಸ್ಪರ್ಧೆ ಏರ್ಪಡಲಿದೆ.
ಆದರೆ ರಾಜಕೀಯ ಚಿಂತಕರ ಪ್ರಕಾರ ಶೆಖಾವತ್ ಅವರು ಜಯ ಕಷ್ಟ ಸಾಧ್ಯ. ಆದರೆ ಪ್ರತಿಭಾ ಅವರು ನಿರಾಯಸವಾಗಿ ಗೆಲವು ಸಾಧಿಸಲಿದ್ದಾರೆ.
ಈ ಹಿಂದೆಂದೂ ಕಾಣದಂಥ ಜಿದ್ದಾಜಿದ್ದಿ ರಾಷ್ಟ್ರಪತಿ ಚುನಾವಣೆಯಲ್ಲಿ ಈ ಬಾರಿ ಕಂಡು ಬರುತ್ತಿದೆ. ಅಷ್ಟೆ ಅಲ್ಲದೆ ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ಯುಪಿಎ-ಎಡರಂಗ ಮತ್ತು ಎನ್‌ಡಿಎ ಮಿತ್ರಪಕ್ಷಗಳು ತೊಡಗಿಕೊಂಡಿವೆ.
|