ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ಲಿಬರ್‌ಹಾನ್ : ವರದಿ ಸಲ್ಲಿಕೆಗೆ ಕಾಲವಕಾಶ
webdunia
ಅಯೋಧ್ಯಾದಲ್ಲಿನ ಬಾಬರಿ ಮಸೀದಿ ಧ್ವಂಸದ ತನಿಖೆಗೆ ನೇಮಕವಾಗಿರುವ ಲಿಬರ್‌ಹಾನ್ ಆಯೋಗಕ್ಕೆ ವರದಿ ಸಲ್ಲಿಸಲು ಹೆಚ್ಚುವರಿ ಎರಡು ತಿಂಗಳ ಕಾಲಾವಧಿಯನ್ನು ವಿಸ್ತರಿಸಲಾಗಿದೆ.

ಈ ವರ್ಷದ ಮಾರ್ಚ್ 31ಕ್ಕೆ ಆಯೋಗದ ನೇತೃತ್ವ ವಹಿಸಿರುವ ನಿವೃತ್ತ ನ್ಯಾಯಮೂರ್ತಿ ಮನಮೋಹನ್ ಸಿಂಗ್ ಲಿಬರ್‌ಹಾನ್ ಅವರ ಅವಧಿ ಮುಕ್ತಾಯಗೊಂಡಿತ್ತು.

ಆದರೆ ಈ ಅವಧಿಯನ್ನು ಜೂನ್ 30, 2007ರವರೆಗೆ ಅಂದರೆ ಮೂರು ತಿಂಗಳವರಗೆ ವಿಸ್ತರಿಸಲಾಗಿತ್ತು. ನಿಗದಿ ಪಡಿಸಲಾದ ಅವಧಿ ಮುಕ್ತಾಯಕ್ಕೆ ಅಥವಾ ಅದಕ್ಕೂ ಮೊದಲು ವರದಿಯನ್ನು ಸಲ್ಲಿಸುವಂತೆ ಸ್ಪಷ್ಟವಾಗಿ ತಿಳಿಸಲಾಗಿತ್ತು.

ಆದರೆ, ಸುಮಾರು 14 ವರ್ಷಗಳಷ್ಟು ಹಳೆಯದಾದ ಈ ಪ್ರಕರಣದ ತನಿಖಾವಧಿಯನ್ನು ಮತ್ತೆ ಅಗಸ್ಟ್‌ಗೆವರೆಗೆ ಹೆಚ್ಚಿಸಲಾಗಿದೆ.

ಮಸೀದಿ ಧ್ವಂಸಗೊಂಡ ಹದಿನೈದು ದಿನಗಳಲ್ಲಿ ತನಿಖಾ ಆಯೋಗವನ್ನು ರಚಿಸಲಾಗಿತ್ತು. ಈ ಸಂದರ್ಭದಲ್ಲಿ ಉಂಟಾದ ಘಟನೆಗಳು ಕುರಿತು ಈ ಆಯೋಗ ತನಿಖೆ ನಡೆಸುತ್ತಿದೆ.
ಮತ್ತಷ್ಟು
ಇಂಡೊ-ಪಾಕ್ ಮಾತುಕತೆ ಆರಂಭ
ಪ್ರತಿಭಾ ವಿರುದ್ಧದ ಅರ್ಜಿ ವಜಾ
ಸ್ಫೋಟಕ ಸಿಡಿಸಲು ಸೆಲ್ ಬಳಕೆ
ವರುಣನ ಅರ್ಭಟಕ್ಕೆ 63 ಮಂದಿ ಬಲಿ
ಮಹಿಳಾ ಕ್ಯಾಪ್ಟನ್ ಆತ್ಮಹತ್ಯೆ
ಎನ್‌ಡಿಎ ಆರೋಪದಲ್ಲಿ ಸತ್ಯಾಂಶವಿಲ್ಲ