ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ಬೆಂಗಳೂರಿನಲ್ಲಿ ಮತ್ತಿಬ್ಬರು ಉಗ್ರರ ಸೆರೆ
webdunia
ಬ್ರಿಟನ್ ನಲ್ಲಿ ಭಯೋತ್ಪಾದನೆ ನಡೆಸಲು ಯತ್ನಿಸಿದ ಕರ್ನಾಟಕದ ಉಗ್ರನನ್ನು ಬ್ರಿಟನ್ ಪೊಲೀಸರು ನಿನ್ನೆ ಬಂಧಿಸಿರುವ ಬೆನ್ನಿಗೇ ಮ ತ್ತಿಬ್ಬರು ಸಂಶಯಾಸ್ಪದ ವ್ಯಕ್ತಿಗಳನ್ನು ಇಂದು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿ ಕುಳಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಗ್ರಗಾಮೀ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ ಎಂಬ ಸಂಶಯದ ಮೇಲೆ ಇಬ್ಬರ ಬಂಧನವಾಗಿದೆ. ಅವರಲ್ಲಿ ಓರ್ವ ಎಂಜಿನಿಯರ್ ಹಾಗೂ ಮತ್ತೋರ್ವ ವೈದ್ಯಕೀಯ ವೃತ್ತಿ ನಡೆಸುತ್ತಿದ್ದ ಎನ್ನಲಾಗಿದೆ.

ಈ ನಡುವೆ ಬೆಂಗಳೂರು ಪೊಲೀಸರು ಬೆಂಗಳೂರು-ಯು.ಕೆ ನಡುವಿನ ದೂರವಾಣಿ ಸಂಭಾಷಣೆಗಳ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ತನಿಖೆಯ ದೃಷ್ಟಿಯಿಂದ ಹೆಚ್ಚಿನ ಮಾಹಿತಿಯನ್ನು ಪೊಲೀಸರು ನೀಡುತ್ತಿಲ್ಲ.

ಈ ನಡುವೆ ಬಂಧಿತ ಉಗ್ರ ಹನೀಪ್ ಬೆಂಗಳೂರಿನ ಮನೆಯಲ್ಲಿ ಆತಂಕ ಮಡಗಟ್ಟಿದೆ. ಆತ ಉಗ್ರನಾಗುವ ಸಾಧ್ಯತೆಯ ಬಗ್ಗೆ ಅವರು ತಳ್ಳಿಹಾಕಿದ್ದಾರೆ. ಇದೇ ವೇಳೆ ಚಿಕ್ಕಮಗಳೂರಿನ ಮೂಡಿಗೆರೆಯ ಆತನ ಮನೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಮತ್ತಷ್ಟು
ಲಿಬರ್‌ಹಾನ್ : ವರದಿ ಸಲ್ಲಿಕೆಗೆ ಕಾಲವಕಾಶ
ಇಂಡೊ-ಪಾಕ್ ಮಾತುಕತೆ ಆರಂಭ
ಪ್ರತಿಭಾ ವಿರುದ್ಧದ ಅರ್ಜಿ ವಜಾ
ಸ್ಫೋಟಕ ಸಿಡಿಸಲು ಸೆಲ್ ಬಳಕೆ
ವರುಣನ ಅರ್ಭಟಕ್ಕೆ 63 ಮಂದಿ ಬಲಿ
ಮಹಿಳಾ ಕ್ಯಾಪ್ಟನ್ ಆತ್ಮಹತ್ಯೆ