ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ರಾಹುಲ್ ಗಾಂಧಿಯಿಂದ ಕ್ಯೂಬಾ ಸಚಿವರ ಭೇಟಿ
webdunia
ಕ್ಯೂಬಾ ದ್ವೀಪರಾಷ್ಚ್ರದ ಪ್ರವಾಸದಲ್ಲಿರುವ ಸಂಸದ ರಾಹುಲ್ ಗಾಂಧಿ ಅಲ್ಲಿನ ವಿದೇಶಾಂಗ ಸಚಿವ ಫಿಲಿಫ್ ಪೆರೆಜ್ ರೂಕ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಭೇಟಿಯ ವೇಳೆ ಉಭಯ ರಾಷ್ಟ್ರಗಳ ಸಂಬಂಧಗಳ ಕುರಿತು ಮತ್ತು ಭಾರತದ ನಿಯೋಗಕ್ಕೆ ವಹಿಸಲಾಗಿರುವ ವಿಷಯಗಳ ಕುರಿತು ಉಭಯ ನಾಯಕರು ಮಾತುಕತೆ ನಡೆಸಿದರು.

ಭಾನುವಾರ ಕ್ಯೂಬಾಗೆ ಆಗಮಿಸಿರುವ ರಾಹುಲ್, ಏಡ್ಸ್ ವಿರುದ್ಧ ಹೋರಾಟ ಮತ್ತು, ಈ ಮಾರಣಾಂತಿಕ ರೋಗದ ತಡೆಗಟ್ಟುವಿಕೆಗಾಗಿ ಕ್ಯೂಬಾ ಕೈಗೊಂಡಿರುವ ಕ್ರಮಗಳ ಕುರಿತು ಚರ್ಚೆ ನಡೆಸಿದರು.

ಕ್ಯೂಬಾದಲ್ಲಿ ಭಾರತೀಯ ರಾಯಭಾರಿ ಮಿತ್ರ ವಶಿಷ್ಟ ಹಾಗೂ ವಿದೇಶಾಂಗ ಸಚಿವಾಲಯದ ಏಷ್ಯಾ ವ್ಯವಹಾರಗಳ ನಿರ್ದೇಶಕ ಅಲ್ಬರ್ಟ್ ಬ್ಲಾಂಕೋ ಅವರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಮತ್ತಷ್ಟು
ಬೆಂಗಳೂರಿನಲ್ಲಿ ಮತ್ತಿಬ್ಬರು ಉಗ್ರರ ಸೆರೆ
ಲಿಬರ್‌ಹಾನ್ : ವರದಿ ಸಲ್ಲಿಕೆಗೆ ಕಾಲವಕಾಶ
ಇಂಡೊ-ಪಾಕ್ ಮಾತುಕತೆ ಆರಂಭ
ಪ್ರತಿಭಾ ವಿರುದ್ಧದ ಅರ್ಜಿ ವಜಾ
ಸ್ಫೋಟಕ ಸಿಡಿಸಲು ಸೆಲ್ ಬಳಕೆ
ವರುಣನ ಅರ್ಭಟಕ್ಕೆ 63 ಮಂದಿ ಬಲಿ