ವಾಣಿಜ್ಯ ಮತ್ತು ಆರ್ಥಿಕ ಸಂಬಂಧಗಳ ಸುಧಾರಣೆಯ ಕುರಿತು ಮಾತುಕತೆಗಾಗಿ ಭಾರತಕ್ಕೆ ಆಗಮಿಸಿರುವ ವಿಯಟ್ನಾಂ ಪ್ರಧಾನಿ ನುಗ್ಯನ್ ಟಾನ್ ಡಂಗ್ ಅವರನ್ನು ಬಂಗಾಲದ ಸಚಿವ ಮನಬ್ ಮುಖರ್ಜಿ ಬುಧವಾರ ಮುಂಜಾನೆ 8.40ರ ವೇಳೆ ಬರ ಮಾಡಿಕೊಂಡರು.
ಸುಮಾರು 172 ಮಂದಿಯೊಂದಿಗಿನ ನಿಯೋಗದೊಂದಿಗೆ ಡಂಗ್ ಅವರು ವಿಶೇಷ ವಿಮಾನದಲ್ಲಿ ಬಂದಿಳಿದರು. ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಜಿ ಡಂಗ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.
ತನ್ನ ಭಾರತ ಭೇಟಿಯ ವೇಳೆ ವಿಯೆಟ್ನಾಂ ಪ್ರಧಾನಿಯವರು ಹೊ ಚಿ ಮಿನ್ ಸ್ಮಾರಕ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ. ಬಳಿಕ ಅವರು ಟಾಟಾ ಸ್ಟೀಲ್ ಸ್ಥಾವರಕ್ಕೆ ಭೇಟಿ ನೀಡಲಿದ್ದು, ಸಾಯಂಕಾಲ ತನ್ನ ನಿಯೋಗದೊಂದಿಗೆ ವಿಶೇಷ ವಿಮಾನದಲ್ಲಿ ಮುಂಬಯಿಗೆ ತೆರಳಲಿದ್ದಾರೆ.
|