ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ಭೈರೋನ್ ಸಿಂಗ್ ರಾಜಿನಾಮೆ ಅಗತ್ಯವಿಲ್ಲ
webdunia
ರಾಷ್ಟ್ರಪತಿ ಹುದ್ದೆಗಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಹಾಲಿ ಉಪರಾಷ್ಟ್ರಪತಿ ಭೈರೋನ್ ಸಿಂಗ್ ಶೆಖಾವತ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂಬ ಕಾಂಗ್ರೆಸ್ ಬೇಡಿಕೆಯನ್ನು ಸುಷ್ಮಾ ಸ್ವರಾಜ್ ಅವರು ಅದರ ಅಗತ್ಯವಿಲ್ಲ ಎಂಬುದಾಗಿ ತಿಳಿಸಿದ್ದಾರೆ.

ರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸುವವರು ಉಪರಾಷ್ಟ್ರಪತಿ ಹುದ್ದೆಗೆ ರಾಜಿನಾಮೆ ನೀಡಬೇಕಾದ ಅಗತ್ಯವಿಲ್ಲ.ಈಗಾಗಲೇ ಐದು ಮಂದಿ ಉಪರಾಷ್ಟ್ರಪತಿಗಳು ರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸುವಾಗ ತಮ್ಮ ಹುದ್ದೆಗೆ ರಾಜಿನಾಮೆ ನೀಡಿರಲಿಲ್ಲ ಎಂದು ಶೆಖಾವತ್ ಅವರ ವಕ್ತಾರೆ ಸುಶ್ಮಾ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

ಈ ಹಿಂದಿನ ಉಪರಾಷ್ಟ್ರಪತಿಗಳಾದ ಡಾ.ರಾಧಾಕೃಷ್ಣನ್,ಜಾಕೀರ್ ಹುಸೇನ್,ಶಂಕರ್ ದಯಾಳ್ ಶರ್ಮಾ,ಆರ್.ವೆಂಕಟರಾಮನ್ ಮತ್ತು ಕೆ.ಆರ್.ನಾರಾಯಣನ್ ಅವರು ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಿದಾಗ ತಮ್ಮ ಹುದ್ದೆಗೆ ರಾಜಿನಾಮೆ ಸಲ್ಲಿಸಿರಲಿಲ್ಲ ಎಂದು ಹೇಳಿದರು.

ಆ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ್ದು ಆಧಾರವಿಲ್ಲದ ಹಾಗೂ ಅಗತ್ಯವಿಲ್ಲದ ಬೇಡಿಕೆಯಾಗಿದೆ ಎಂದು ಸುಷ್ಮಾ ಆ ಸಂದರ್ಭದಲ್ಲಿ ಟೀಕಿಸಿದರು.

ಈ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಯಾರನ್ನೂ ಅವಲಂಭಿತವಾಗಿಲ್ಲ ಅಲ್ಲದೆ ಅಡ್ಡ ಮತದಾನದ ಬಗ್ಗೆಯೂ ಪ್ರೋತ್ಸಾಹ ನೀಡುವುದಿಲ್ಲ.ಅಲ್ಲದೇ ರಾಷ್ಟ್ರಪತಿ ಚುನಾವಣೆ ಪಕ್ಷದ ನೆಲೆ ಅಥವಾ ಚಿಹ್ನೆಯಡಿಯಲ್ಲಿ ನಡೆಯುತ್ತಿಲ್ಲ.ಇದು ಚುನಾವಣಾ ಆಯೋಗದ ನಿರ್ದೇಶನದಲ್ಲಿ ನಡೆಯುತ್ತಿರುವುದಾಗಿ ತಿಳಿಸಿದರು.
ಮತ್ತಷ್ಟು
ವಿಯೆಟ್ನಾಂ ಪ್ರಧಾನಿ ಆಗಮನ
ರಾಹುಲ್ ಗಾಂಧಿಯಿಂದ ಕ್ಯೂಬಾ ಸಚಿವರ ಭೇಟಿ
ಬೆಂಗಳೂರಿನಲ್ಲಿ ಮತ್ತಿಬ್ಬರು ಉಗ್ರರ ಸೆರೆ
ಲಿಬರ್‌ಹಾನ್ : ವರದಿ ಸಲ್ಲಿಕೆಗೆ ಕಾಲವಕಾಶ
ಇಂಡೊ-ಪಾಕ್ ಮಾತುಕತೆ ಆರಂಭ
ಪ್ರತಿಭಾ ವಿರುದ್ಧದ ಅರ್ಜಿ ವಜಾ