ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ಮುಂದಿನ ದಶಕದಲ್ಲಿ ನೀರಿನ ಕೊರತೆ-ಪಿಎಂ
ಮುಂದಿನ ದಶಕಗಳಲ್ಲಿ ನೀರಿನ ತೀವ್ರ ಕೊರತೆ ತಲೆದೋರಲಿದೆ ಎಂದು ಎಚ್ಚರಿಸಿರುವ ಪ್ರಧಾನಿ ಡಾ.ಮನಮೋಹನ್ ಸಿಂಗ್,ಅಮೂಲ್ಯವಾದ ಜಲಸಂಪನ್ಮೂಲವನ್ನು ಉಳಿಸಿಕೊಳ್ಳಲು ಸರಕಾರ,ಜನತೆ ಹಾಗೂ ಸ್ವಯಂಸೇವಾ ಸಂಸ್ಥೆಗಳ ಪ್ರಯತ್ನ ಅತ್ಯಗತ್ಯ ಎಂದು ಸಲಹೆ ನೀಡಿದರು.

ಜಲಸಂಪನ್ಮೂಲ ಉಳಿಸಲು ಸರಕಾರ ಬೃಹತ್ ಕಾರ್ಯಕ್ರಮ ರೂಪಿಸಿ ಸ್ವಯಂಸೇವಾ ಸಂಸ್ಥೆಗಳು,ಸಮಾಜ ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಹೇಳಿದರು.

ಪ್ರಕೃತಿ ನೀರಿನಂತಹ ಅಮೂಲ್ಯ ಕೊಡುಗೆ ನೀಡಿದೆ.ಹಾಗೆಯೇ ಕುಡಿಯುವ ನೀರಿನ ಗುಣಮಟ್ಟ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ನುಡಿದರು.

ಸಾಂಕ್ರಾಮಿಕ ಖಾಯಿಲೆಗಳು ಹೆಚ್ಚಾಗಿ ಕಲುಷಿತ ನೀರಿನಿಂದಲೇ ಹರಡುತ್ತದೆ.ಹೀಗಾಗಿ ಜಲ ಮಂಡಳಿ ಸುರಕ್ಷಿತ ಕುಡಿಯುವ ನೀರಿನ ಬಳಕೆ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಎಂದರು.

1972ರಲ್ಲಿ ಗ್ರಾಮೀಣ ನೀರು ಸರಬರಾಜು ಕಾರ್ಯಕ್ರಮವನ್ನು ಆರಂಭಿಸಿದ ಮೇಲೆ ಸುರಕ್ಷಿತ ನೀರನ್ನು ಪೂರೈಸುವ ಕಾರ್ಯದಲ್ಲಿ ಸುಧಾರಣೆ ಕಂಡು ಬಂದಿದೆ.ಆದರೆ ಸಂಪನ್ಮೂಲದ ಕೊರತೆಯಿಂದ ಕೆಲವು ಪ್ರದೇಶಗಳಿಗೆ ನೀರನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ಪ್ರಧಾನಿ ಹೇಳಿದರು.
ಮತ್ತಷ್ಟು
ಭೈರೋನ್ ಸಿಂಗ್ ರಾಜಿನಾಮೆ ಅಗತ್ಯವಿಲ್ಲ
ವಿಯೆಟ್ನಾಂ ಪ್ರಧಾನಿ ಆಗಮನ
ರಾಹುಲ್ ಗಾಂಧಿಯಿಂದ ಕ್ಯೂಬಾ ಸಚಿವರ ಭೇಟಿ
ಬೆಂಗಳೂರಿನಲ್ಲಿ ಮತ್ತಿಬ್ಬರು ಉಗ್ರರ ಸೆರೆ
ಲಿಬರ್‌ಹಾನ್ : ವರದಿ ಸಲ್ಲಿಕೆಗೆ ಕಾಲವಕಾಶ
ಇಂಡೊ-ಪಾಕ್ ಮಾತುಕತೆ ಆರಂಭ