ಕೊಳವೆ ಬಾವಿಯಲ್ಲಿ ಬಿದ್ದಿರುವ ಬಾಲಕನನ್ನು ಹೊರತೆಗೆಯುವ ಕಾರ್ಯ ಪ್ರಗತಿಯಲ್ಲಿದ್ದು, ಆತನಜೀವ ಉಳಿಸುವ ಕಾರ್ಯಾಚರಣೆ ಭರದಿಂದ ಸಾಗಿದೆ.
ಐದರ ಹರೆಯದ ಬಾಲಕ ಸೂರಜ್ ಕಳೆದ ದಿನ ಜೈಪುರದ ಬಗ್ರೂ ನಿಮೇದಾ ಗ್ರಾಮದಲ್ಲಿರುವ ಕೊಳವೆ ಬಾವಿಯೊಂದರಲ್ಲಿ ಬಿದ್ದು , ಅದರೊಳಗೆ ಸಿಕ್ಕಿಹಾಕಿದ್ದನು.
ಬುಧವಾರ ಸಂಜೆಯಿಂದ ಆತನನ್ನು ಪಾರುಮಾಡುವ ಕಾರ್ಯಾಚರಣೆ ಸಮರೋಪಾದಿಯಲ್ಲಿ ನಡೆಯುತ್ತಿದೆ.
|