ಕಾಂಗ್ರೆಸ್ ಹಾಗೂ ಬಿಜೆಪಿಗಳಿಗೆ ಪರ್ಯಾಯಪಕ್ಷವಾಗಿ ಇತ್ತೀಚೆಗೆ ರಚಿಸಲ್ಪಟ್ಟಿರುವ ರಾಷ್ಟ್ರೀಯ ಪ್ರಗತಿವಾದಿ ಐಕ್ಯರಂಗ(ಯುಎನ್‌ಪಿಎ)ವನ್ನು "ಬದುಕಿ ಉಳಿಯಬಲ್ಲ" ತೃತೀಯ ರಂಗವೆಂದು ಒಪ್ಪಿಕೊಳ್ಳಲಾಗದು ಎಂದು ಸಿಪಿಐ(ಎಂ) ಪಾಲಿಟ್ ಬ್ಯೂರೊ ಸದಸ್ಯ ಸೀತಾರಾಮ್ ಯೆಚೂರಿ ನಗೆಯಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಎಡರಂಗ ಪಕ್ಷಗಳು ಸಮಾನ ಮನಸ್ಕ ಪಕ್ಷಗಳೊಂದಿಗೆ ಕೂಡಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯಾವಾಗಿ ರಾಜಕೀಯ ಪರಿಸ್ಥಿತಿಯನ್ನು ನಿರ್ಮಾಣ ಮಾಡುವ ಸಾಧ್ಯತೆಯನ್ನು ಯೆಚೂರಿ ಅಲ್ಲಗಳೆಯಲಿಲ್ಲ.
2009ರ ಸಾರ್ವತ್ರಿಕ ಚುನಾವಣೆ ಮುಂಚೆ ರಾಜಕೀಯ ಒಕ್ಕೂಟಗಳಲ್ಲಿ ಭಾರೀ ನಿರೀಕ್ಷೆಯನ್ನು ನಾವು ಹೊಂದಿದ್ದೇವೆ. ಕಾಂಗ್ರೆಸ್ ಮತ್ತು ಬಿಜೆಪಿ ನೀತಿಗಳ ವಿರೋಧವೇ ಚುನಾವಣೆಯ ಪ್ರಮುಖ ಅಂಶವಾಗಲಿದೆ ಎಂದು ಅವರು ಹೇಳಿದರು. ಕೇಂದ್ರದಲ್ಲಿನ ಯುಪಿಎ ಸರಕಾರಕ್ಕೆ ಸಿಪಿಐ(ಎಂ) ಬಾಹ್ಯ ಬೆಂಬಲ ನೀಡಿದೆ.
ಉಪರಾಷ್ಟ್ರಪತಿ ಚುನಾವಣೆಗೆ ಸೂಕ್ತ ಮತ್ತು ಎಲ್ಲರೂ ಒಪ್ಪಿಕೊಳ್ಳುವಂತೆ ಅಭ್ಯರ್ಥಿಯನ್ನು ಸಿಪಿಐ (ಎಂ) ಶೋಧಿಸಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.
ರಾಷ್ಟ್ರಪತಿ ಚುನಾವಣೆಗೆ ಯುಪಿಎ-ಎಡಪಕ್ಷಗಳ ಅಭ್ಯರ್ಥಿಯಾಗಿರುವ ಪ್ರತಿಭಾ ಪಾಟೀಲ್ ವಿರುದ್ಧ ಬಿಜೆಪಿ ಮಾಡುತ್ತಿರುವ ಆಪಾದನೆಗಳು ಸಂಪೂರ್ಣವಾಗಿ ನಿರಾಧಾರವಾಗಿವೆ.
ದೇಶದ ಗೌರವಯುತ ಸ್ಥಾನಕ್ಕೆ ಮಿಥ್ಯಾವಾದಂಥ ಆರೋಪಗಳು ಘನತೆಯನ್ನು ತಂದುಕೊಟ್ಟಿರತಕ್ಕಂಥ ಯಾವುದೇ ಸಾಕ್ಷಿಗಳಿಲ್ಲ ಎಂದು ಅವರು ಹೇಳಿದರು.
|